ರಾಜಕೀಯ

ಒಲ್ಲದ ಮನಸ್ಸಿನಿಂದ ಲೋಕಸಭೆ ಉಪಚುನಾವಣೆ ಒಪ್ಪಿಕೊಳ್ಳುತ್ತಿರುವ ಮಂಡ್ಯ ರೈತರು!

Shilpa D
ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆ ನವೆಂಬರ್ 3 ರಂದು ನಡೆಯುವ ಲೋಕಸಭೆ ಉಪ ಚುನಾವಣೆಗೆ ಸಿದ್ಧಗೊಳ್ಳುತ್ತಿದೆ. ಆದರೆ ಇಲ್ಲಿನ ಜನ ಚುನಾವಣೆ ಎದುರಿಸುವ ಮನಸ್ಥಿತಿಯಲ್ಲಿಲ್ಲ, 
ಇತ್ತೀಚೆಗೆ ನಡೆಯ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 8 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿರುವ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಆತ್ಮ ವಿಶ್ವಾಸದಲ್ಲಿದೆ. ಆದರೆ ಅಧಿಕಾರಕ್ಕೆ ಬಂದಾಗಿನಿಂದಲೂ  ಸಾಲಮನ್ನಾ ವಿಷಯ ಸಂಬಂಧಿಸಿದಂತೆ ಸಿಎಂ ಕುಮಾರ ಸ್ವಾಮಿ ನೀಡುತ್ತಿರುವ ಭರವಸೆಗಳಿಂದ ಇಲ್ಲಿನ ಜನ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. 
ಅದಿಕಾರಕ್ಕೆ ಬಂದು 5 ತಿಂಗಳಾಯ್ತು, ಸಾಲಮನ್ನಾ ಇನ್ನೂ ಭರವಸೆಯಾಗಿಯೇ ಉಳಿದಿದೆ,  ನಾವು ಪದೇ ಪದಗೇ ಸಹಕಾರ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದೇವೆ, ಆದರೆ ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಬ್ಯಾಂಕ್ ಗಳು ಹೇಳುವುದನ್ನು ಕೇಳಿಕೊಂಡು ಬರುತ್ತಿದ್ದೇವೆ ಎಂದು  ಗೆಜ್ಜಲಗೆರೆ ರೈತರೊಬ್ಬರು ತಿಳಿಸಿದ್ದಾರೆ.
ಸಾಲಮನ್ನಾ ವಿಷಯದಲ್ಲಿ ಮಧ್ಯವರ್ತಿಗಳ ಕಿರುಕುಳದಿಂದ ಬೇಸತ್ತು ಹೋಗಿದ್ದೇವೆ ಎಂದು ಮತ್ತೊಬ್ಬ ರೈತ ಮಹೇಶ್ವರಪ್ಪ ಆರೋಪಿಸಿದ್ದಾರೆ.,ಕೃಷಿ ಮಾಡಲು ಮುಂದಾದರೇ ರಸಗೊಬ್ಬರಗಳ ಬೆಲೆ ವಿಪರೀತ ಏರಿಕೆಯಾಗಿದೆ, ಹೀಗಾಗಿ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಏರಿಸಬೇಕು ಎಂದು ರೈತರ ಆಗ್ರಹವಾಗಿದೆ.
ಜಿಲ್ಲೆಯಲ್ಲಿರುವ ಮೈಶುಗರ್ ಸಕ್ಕರೆ ಕಾರ್ಖಾನೆ ಕೆಲಸ ಸ್ಥಗಿತಗೊಳಿಸಿರುವುದರಿಂದ ಸಾವಿರಾರು ರೈತರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ, ಜೊತೆಗೆ ಸರ್ಕಾರ ಆರೋಗ್ಯ ಕಾರ್ಡ್ ವಿತರಿಸುವಲ್ಲಿ ವಿಫಲವಾಗಿದೆ, ಹೀಗಾಗಿ ಬದಲಿ ಉದ್ಯೋಗ ವ್ಯವಸ್ಥೆ ಮಾಡುವಂತೆ ಮತದಾರರು ಆಗ್ರಹಿಸಿದ್ದಾರೆ.
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್ ನ ಎಲ್ ಶಿವರಾಮೇಗೌಡ ಕಣಕ್ಕಿಳಿದಿದ್ದಾರೆ,  ಇವರ ವಿರುದ್ಧ ಬಿಜೆಪಿಯ ಡಾ. ಸಿದ್ದರಾಮಯ್ಯ ಸ್ಪರ್ಧಿಸಿದ್ದಾರೆ,  ಶಿವರಾಮೇಗೌಡ ಪರವಾಗ ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಮೊದಲ ಸುತ್ತಿನ ಪ್ರಚಾರ ಮುಗಿಸಿದ್ದಾರೆ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರ ಸ್ವಾಮಿ ಮುಂದಿನ ದಿನಗಳಲ್ಲಿ ಹೈ ವೊಲ್ಟೇಜ್ ಪ್ರಚಾರ ನಡೆಸಲಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಗೆಲುವಿಗಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ,  ಬಿಜೆಪಿ ಕೂಡ ಪ್ರಬಲ ಪೈಪೊಟಿ ನೀಡಲು ಸಜ್ಜಾಗುತ್ತಿದೆ, ನಾನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಶಿವರಾಮೆ ಗೌಡ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
SCROLL FOR NEXT