ಬೆಂಗಳೂರು: ಲೋಕಸಭಾ ಉಪಚುನಾವಣಾ ಪ್ರಚಾರ ಕಾವೇರುತ್ತಿದ್ದು,ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬಳ್ಳಾರಿ, ಶಿವಮೊಗ್ಗ, ಮಂಡ್ಯ, ರಾಮನಗರ ಮತ್ತು ಜಮಖಂಡಿ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಸಚಿವ ಜಮೀರ್ ಅಹಮದ್ ಖಾನ್ ಜೊತೆ ಪ್ರಚಾರ ನಡೆಸಿದ್ದಾರೆ, ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಸಹಮತದ ಅಭ್ಯರ್ಥಿಯನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ.
ಪ್ರ: ಬಹುತೇಕ ಎಲ್ಲಾ ಚುನಾವಣೆಗಳಲ್ಲೂ ನೀವು ಸ್ಪರ್ಧಿಸಿದ್ದೀರಿ ಮತ್ತು ಪ್ರಚಾರ ನಡೆಸಿದ್ದೀರಿ, ಈ ಉಪ ಚುನಾವಣೆ ನಿಮಗೆ ವಿಭಿನ್ನವಾಗಿದೆ ಎನಿಸುತ್ತಿದೆಯೇ?
ನಿಜಕ್ಕೂ ಇದೊಂದು ವಿಭಿನ್ನ ಚುನಾವಣೆ, ಏಕೆಂದರೇ ಕೋಮುವಾದಿ ಶಕ್ತಿಗಳ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಹೋರಾಡುತ್ತಿದೆ, ಇದು ಎಲ್ಲಾ ರೀತಿಯಲ್ಲೂ ವಿಭಿನ್ನವಾಗಿದೆ ಜಾತ್ಯಾತೀತತೆ ಮೇಲೆ ನಂಬಿಕೆ ಇಟ್ಟವರು ಒಟ್ಟಿಗೆ ಕೋಮು ಶಕ್ತಿಗಳ ವಿರುದ್ಧ ನಡೆಸುತ್ತಿರುವ ಹೋರಾಟ ಇದಾಗಿದೆ, ಮಧು ಬಂಗಾರಪ್ಪ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ.
ಪ್ರ: ಸದ್ಯ ನಡೆಯುತ್ತಿರುವ ಉಪಚುನಾವಣೆ 2019ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದು ಕುಮಾರಸ್ವಾಮಿ ಎಂದು ಹೇಳುತ್ತಿದ್ದಾರೆ, ನೀವು ಇದನ್ನು ಬೆಂಬಲಿಸುತ್ತೀರಾ?
ಇದನ್ನು ನಾನು ಸೆಮಿ ಫೈನಲ್ ಎಂದು ಹೇಳುವುದಿಲ್ಲ, ಲೋಕಸಭೆ ಚುನಾವಣೆ ಕೇವಲ 5 ತಿಂಗಳು ಮಾತ್ರ ಇದೆ. ಹೀಗಾಗಿ ಅವರು ಆ ಅರ್ಥದಲ್ಲಿ ಹೇಳಿರಬಹುದು.
ಪ್ರ: ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ನಿಮ್ಮ ಅಭ್ಯರ್ಥಿಯನ್ನು ಹೇಗೆ ಗೆಲ್ಲಿಸಿಕೊಳ್ಳುತ್ತೀರಾ?
2004 ರ ವರೆಗೂ ಶಿವಮೊಗ್ಗ ಕಾಂಗ್ರೆಸ್ ಭಧ್ರಕೋಟೆಯಾಗಿತ್ತು, ಆದರೆ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾದ ನಂತರ, ಅವರು ಅಲ್ಲಿಂದ ಟಿಕೆಟ್ ಪಡೆದು ಗೆಲುವು ಸಾಧಿಸಿದರು, ಇಲ್ಲದಿದ್ದರೇ 2004 ರವರೆಗೆ ಬಿಜೆಪಿ ಶಿವಮೊಗ್ಗದಲ್ಲಿ ಎಂದಿಗೂ ಗೆದ್ದಿರಲಿಲ್ಲ, ಇವತ್ತಿಗೂ ಕೂಡ ಶಿವಮೊಗ್ಗ ಕಾಂಗ್ರೆಸ್ ಭದ್ರ ನೆಲೆಯಾಗಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಾತ್ಯಾತೀತ ಮತಗಳು ಹಂಚಿಕೆಯಾಗುತ್ತಿದ್ದವು. ಆದರೆ ಈ ಬಾರಿ ಹಾಗಾಗುವುದಿಲ್ಲ,
ಪ್ರ: ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ಹೇಗೆ ಒಪ್ಪಿಸಿದಿರಿ?
ಅದೇನು ಕಷ್ಟದ ವಿಷಯವಲ್ಲ, ನಮ್ಮ ರಾಜಕೀಯ ವೈರಿ ಬಿಜೆಪಿ, ಹಾಗಾಗಿ ಅವರ ವಿರುದ್ಧ ಹೋರಾಡುವುದು ಹಾಗೂ ಪಕ್ಷ ಸೋಲಿಸುವುದು ನಮ್ಮ ಉದ್ದೇಶ, ಶಿವಮೊಗ್ಗ ಜೆಡಿಎಸ್ ಗೆ ಬಿಟ್ಟುಕೊಡಲಾಗದು ಎಂದು ಹೇಳಲಾಗಲಿಲ್ಲ.
ಪ್ರ: ಜಮಖಂಡಿ ನಿಮಗೆ ವಯಕ್ತಿಕ ಹೋರಾಟವೇ?
ಈ ಪ್ರಶ್ನೆಯನ್ನು ನನಗೆ ಏಕೆ ಕೇಳುತ್ತೀರಿ, ಉಪ ಚುನಾವಣೆಯ ಎಲ್ಲಾ 5 ಕ್ಷೇತ್ರಗಳು ನಮಗೆ ಮಹತ್ವವಾದದ್ದು, ಎಲ್ಲಾ ಕ್ಷೇತ್ರಗಳಲ್ಲು ನಾವು ಗೆಲ್ಲುತ್ತೇವೆ.
ಪ್ರ: ವಿಎಸ್ ಉಗ್ರಪ್ಪ ಬಳ್ಳಾರಿಗೆ ಹೊರಗಿನವರು ಎಂಬ ವಾಗ್ದಾಳಿಗೆ ನಿಮ್ಮ ಉತ್ತರ ಏನು?
ಬಿಜೆಪಿ ಅಭ್ಯರ್ಥಿ ಶಾಂತಾ ಕೂಡ ಬಳ್ಳಾರಿ ಯವರಲ್ಲ, ಅವರು ಆಂದ್ರಪ್ರದೇಶದವರು, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲು ಚಿತ್ರದುರ್ಗದ ಮೊಳಕಾಲ್ಮೂರು ಹಾಗೂ ಬಾಗಲಕೋಟೆಯ ಬಾದಾಮಿಯಿಂದ ಸ್ಪರ್ಧಿಸಿದ್ದರು,. ಹೀಗಿರುವಾಗ ಉಗ್ರಪ್ಪ ಅವರನ್ನು ಹೇಗೆ ಹೊರಗಿನವರು ಎಂದು ಹೇಳುತ್ತಾರೆ, ಉಗ್ರಪ್ಪ ರಾಜ್ಯ ನಾಯಕರು, ಅವರು ಎಸ್ ಟಿ ಸಮುದಾಯದ ಮುಖಂಡರು, ನಾನು ಬಾದಾಮಿಯಿಂದ ಸ್ಪರ್ಧಿಸಿದ್ದೆ, ಆದರೆ ಬಾದಾಮಿ ಜನ ಎಂದಿಗೂ ನಾನು ಹೊರಗಿನವನು ಎಂದು ಹೇಳಲಿಲ್ಲ, ಅದೇ ರೀತಿ ಬಳ್ಳಾರಿ ಜನತೆ ಕೂಡ ಉಗ್ರಪ್ಪ ಅವರನ್ನು ಹೊರಗಿನವರು ಎನ್ನುವುದಿಲ್ಲ.
ಪ್ರ: ಸಮ್ಮಿಶ್ರ ಪಕ್ಷಗಳ ಜಂಟಿ ಪ್ರಚಾರದ ನಡುವೆಯೂ ಮಂಡ್ಯದಲ್ಲಿ ಕೆಲವು ಸಮಸ್ಯೆಗಳಿವೆ, ಅವುಗಳನ್ನು ಹೇಗೆ ಬಗೆ ಹರಿಸುತ್ತಿರೀ?
ಕೆಲ ಸಮಸ್ಯೆಗಳಿರುವುದು ನಿಜ, ಅವುಗಳನ್ನು ಬಗೆಹರಿಸಲಾಗುವುದು. ಶಿವಮೊಗ್ಗದಲ್ಲಿ ಆ ರೀತಿಯ ಯಾವುದೇ ಸಮಸ್ಯೆಗಳಿಲ್ಲ, ಎಲ್ಲಾ ಕಾರ್ಯಕರ್ತರು ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ.
ಪ್ರ: ನಿಮ್ಮ ಮತ್ತು ಸಚಿವ ಡಿ.ಕೆ ಶಿವಕುಮಾರ್ ನಡುವಿನ ಶೀಥಲ ಸಮರದ ಬಗ್ಗೆ ಏನು ಹೇಳುತ್ತೀರಿ?
ನಮ್ಮಿಬ್ಬರ ನಡುವೆ ಯಾವುದೇ ಸಮರವಿಲ್ಲ, ನಾನು ಯಾವುದೇ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics