ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ 
ರಾಜಕೀಯ

ಕಳೆದ ಚುನಾವಣೆಯಲ್ಲಿ ಜನರು ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ: ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ

ಕಳೆದ ವಿಧಾನಸಭಾ ಚುನಾವಣೆ ಜನರು ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಬಾರಿಯ ಉಪ ಚುನಾವಣೆಯಲ್ಲಿ ಕನಿಷ್ಟ ಎಂದರೂ 20,000 ಮತಗಳನ್ನು ಪಡೆಯುತ್ತೇನೆಂದು ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ...

ಕಳೆದ ವಿಧಾನಸಭಾ ಚುನಾವಣೆ ಜನರು ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಬಾರಿಯ ಉಪ ಚುನಾವಣೆಯಲ್ಲಿ ಕನಿಷ್ಟ ಎಂದರೂ 20,000 ಮತಗಳನ್ನು ಪಡೆಯುತ್ತೇನೆಂದು ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಅವರು, ಈ ಬಾರಿಯ ಉಪ ಚುನಾವಣೆಯಲ್ಲಿ ಗೆಲವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಚುನಾವಣೆಯಲ್ಲಿ ಪ್ರಮುಖ ವಿಚಾರಗಳೇನು? 
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನೇ ಮುಂದುವರೆಸಿದೆ. ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಹಾಗೂ ನೀರಾವರಿ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದು. ಇದೀಗ ಮೈತ್ರಿ ಸರ್ಕಾರ ಅದನ್ನೇ ಮುಂದುವರೆಸುತ್ತಿದೆ. ಚಿಕ್ಕಲ್ಕಿ ಯೋಜನೆಯನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದ ಗೌಡ ಅವರು ಜಾರಿಗೆ ತಂದಿದ್ದರು. ಯೋಜನೆಗೆ ರೂ.42 ಕೋಟಿ ನಿರೀಕ್ಷಿಸಲಾಗಿತ್ತು. ಇದಾದ ಬಳಿಕ ಜಗದೀಶ್ ಶೆಟ್ಟರ್ ಅವರು ಯೋಜನೆ ಮುಂದುವರೆಸಿದ್ದರು, ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಸ್ಥಗಿತಗೊಳಿಸಿತು. ತುಬ್ಚಿ ನೀರಾವರಿ ಯೋಜನೆಯನ್ನೂ ಬಿಜೆಪಿ ಜಾರಿಗೆ ತಂದಿತ್ತು. ಅದೂ ಕೂಡ ಪೂರ್ಣಗೊಳ್ಳಲಿಲ್ಲ. ಹೀಗಾಗಿ ನೀರಾವರಿ ಹಾಗೂ ಕುಡಿಯವ ನೀರು ಯೋಜನೆ ಪ್ರಮುಖ ವಿಚಾರಗಳಾಗಲಿವೆ. 
2018ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಿರಿ. ಮುಂದಿನ ಚುನಾವಣೆಯಲ್ಲಿ ಏನನ್ನು ನಿರೀಕ್ಷಿಸುತ್ತಿದ್ದೀರಿ
ರಾಜ್ಯ ಸರ್ಕಾರ ಜನರ ವಿರೋಧಿ ನೀತಿಗಳೊಂದಿಗೆ ಹಾಗೂ ಎಲ್ಲಾ ರೀತಿಯ ಭ್ರಷ್ಟಾಚಾರಗಳೊಂದಿಗೆ ಮುಂದಕ್ಕೆ ಬಂದಿದೆ ಎಂದು ಜನರು ತಿಳಿಯುತ್ತಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ಯಾವುದೇ ರೀತಿಯ ಕಾರ್ಯಗಳನ್ನು ಮಾಡಿಲ್ಲ. ಹೀಗಾಗಿ ಜನರು ಬಿಜೆಪಿಗೆ ಶೇ.100ರಷ್ಟು ಬೆಂಬಲ ನೀಡಲಿದ್ದಾರೆ. 
ಕಳೆದ ಎರಡು ಚುನಾವಣೆಯಲ್ಲಿ ನಿಮ್ಮ ಸೋಲಿಗೆ ಕಾರಣಗಳೇನು?
ಸಂಗಮೇಶ್ ನಿರಾಣಿ ಸ್ವತಂತ್ರವಾಗಿ ಸ್ಪರ್ಧೆಗಿಳಿದಿದ್ದರಿಂದಾಗಿ ಬಿಜೆಪಿಗೆ ಬರಬೇಕಿದ್ದ ಮತಗಳು ವಿಭಜನೆಗೊಂಡಿದ್ದವು. ಇದಲ್ಲದೆ ಬಿಜೆಪಿಗೆ ಬರಬೇಕಿದ್ದ ಮತಗಳು ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿಗೆ ಹೋಗಿತ್ತು. ಕೆಲ ನಾಯಕರು ಸೃಷ್ಟಿಸಿದ್ದ ಗೊಂದಗಳಿಂದ ಜನರು ನನ್ನನ್ನು ತಪ್ಪಾಗಿ ತಿಳಿದಿದ್ದರು. 
ಜಮಖಂಡಿಯಲ್ಲಿ ಬಹುತೇಕ ಮತಗಳು ಲಿಂಗಾಯತ ಸಮುದಾಯದ್ದೇ ಆಗಿದ್ದು, ಚುನಾವಣೆಯಲ್ಲಿ ಜಾತಿ ಪಾತ್ರ ನಿರ್ವಹಿಸಲಿದೆಯೇ? 
ಹಲವು ದಶಕಗಳಿಂದಲೂ ಜಾತಿ ಹಾಗೂ ಧರ್ಮ ಯಾವುದೇ ರೀತಿಯ ಪಾತ್ರ ನಿರ್ವಹಿಸಿಲ್ಲ. ಕೆಲ ವರ್ಷಗಳಿಂದಷ್ಟೇ ಕೆಲ ನಾಯಕರು ಇಂತಹ ವಿಚಾರಗಳನ್ನು ಹುಟ್ಟುಹಾಕಿದ್ದಾರೆ. ಜಮಖಂಡಿ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಜಾತಿ ಹಾಗೂ ಹಣ ಬಲಕ್ಕೂ ಮೀರಿ ತಮ್ಮ ನೆಚ್ಚಿನ ನಾಯಕನಿಗೆ ಜನರು ಮತ ಹಾಕಲಿದ್ದಾರೆ. 
ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಪರ ಸಹಾನುಭೂತಿ ಅಂಶ ಕೆಲಸ ಮಾಡಲಿದೆಯೇ? 
ಸಹಾನುಭೂತಿ ಕೆಲಸಕ್ಕೆ ಬರುವುದಿಲ್ಲ. ಶಾಸಕರು ನಿಧನ ಹೊಂದಿದಾಗ ಅವರ ಪತ್ನಿಯರು ಚುನಾವಣಾ ಕಣಕ್ಕೆ ಬಂದರೆ ಮಾತ್ರ ಸಹಾನುಭೂತಿ ಕೆಲಸ ಮಾಡುತ್ತದೆ. ರೈತರ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಸಾವಿನ ಬಳಿಕ ಅವರ ಪುತ್ರ ಚುನಾವಣೆಯಲ್ಲಿ ನಿಂತರು. ಆದರೆ, ಅದು ಕೆಲಸಕ್ಕೆ ಬರಲಿಲ್ಲ. 
ಈ ಬಾರಿಯ ಚುನಾವಣೆಯಲ್ಲಿ ಎಷ್ಟು ಮತಗಳನ್ನು ನಿರೀಕ್ಷಿಸುತ್ತಿದ್ದೀರಿ? 
ಕಳೆದ ಕೆಲ ಚುನಾವಣೆಗಳಲ್ಲಿ ಕಾಂಗ್ರೆಸ್ 50,000ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಕನಿಷ್ಟ 20,000 ಮತಗಳನ್ನು ಪಡೆದು ನಾನು ಗೆಲವು ಸಾಧಿಸುತ್ತೇನೆಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT