ಆನಂದ್ ನ್ಯಾಮಗೌಡ 
ರಾಜಕೀಯ

ತಂದೆಯ ಕೆಲಸವನ್ನು ನಾನು ಮುಂದುವರೆಸಬೇಕೆಂದು ಜನ ಬಯಸುತ್ತಿದ್ದಾರೆ: ಆನಂದ್ ನ್ಯಾಮಗೌಡ

ತಂದೆ ಕೆಲಸವನ್ನು ನಾನು ಮುಂದುವರೆಸಬೇಕೆಂದು ಜನರು ಬಯಸುತ್ತಿದ್ದಾರೆಂದು ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಅವರು ಹೇಳಿದ್ದಾರೆ...

ಜಮಖಂಡಿ: ತಂದೆ ಕೆಲಸವನ್ನು ನಾನು ಮುಂದುವರೆಸಬೇಕೆಂದು ಜನರು ಬಯಸುತ್ತಿದ್ದಾರೆಂದು ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಅವರು ಹೇಳಿದ್ದಾರೆ. 
ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಬರುವುದು ದೂರದ ಮಾತು. ರಾಜಕೀಯಕ್ಕೆ ಬರುವುದಿಲ್ಲ ಎಂದು ನಾನು ಪದೇ ಪದೇ ತಂದೆಗೆ ಹೇಳುತ್ತಲೇ ಇದ್ದೆ. ಆದರೆ, ತಂದೆಯ ಸಾವಿನ ಬಳಿಕ ಬೆಂಬಲಿಗರು ತಂದೆ ಕೆಲಸಗಳನ್ನು ಮುಂದವರೆಸುವಂತೆ ಸಾಕಷ್ಟು ಒತ್ತಡ ಹೇರಿದರು ಎಂದು ಹೇಳಿದ್ದಾರೆ. 
ಚುನಾವಣೆ ಎದುರಿಸಲು ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದ್ದೀರಿ? 
ನನ್ನ ತಂದೆ ಅನಿರೀಕ್ಷಿತವಾದದ್ದು. ರಾಜಕೀಯಕ್ಕೆ ಬರುದ್ದೇನೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ರಾಜಕೀಯಕ್ಕೆ ಬರಬೇಕೆಂದು ಜನರು ಒತ್ತಾಯ ಮಾಡಿದ್ದರು. ತಂದೆಯ ಕೆಲಸಗಳನ್ನು ಮುಂದುವರೆಸಬೇಕೆಂದು ಬಯಸಿದ್ದರು. ಹೀಗಾಗಿ ನಾನು ತಂದೆಯ ಹಾದಿ ಹಿಡಿಯುವ ನಿರ್ಧಾರಕ್ಕೆ ಬಂದಿದ್ದೆ.
ಉಪ ಚುನಾವಣೆಯಲ್ಲಿ ಪ್ರಮುಖ ವಿಚಾರಗಳಾವುದು? 
ಚುನಾವಣೆಯಲ್ಲಿ ಪ್ರಮುಖ ವಿಚಾರಗಳೆಂಬುದು ಯಾವುದೂ ಇಲ್ಲ. ಜಮಖಂಡಿಯಲ್ಲಿ ನನ್ನ ತಂದೆ ಸಾಕಷ್ಟು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಇವುಗಳಲ್ಲಿ ಕೆಲವು ಪೂರ್ಣಗೊಂಡಿವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುವಂತೆ ಜನರು ಬಯಸುತ್ತಿದ್ದಾರೆ. 
ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ನಿಮ್ಮ ತಂದೆ ಕೆಲವೇ ಅಂತರದಲ್ಲಿ ಗೆಲವು ಸಾಧಿಸಿದ್ದರು, ನಿಮ್ಮ ನಿರೀಕ್ಷೆಗಳೇನು? 
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಗಮೇಶ್ ನಿರಾನಿ 25,000 ಮತಗಳನ್ನು ಪಡೆದಿದ್ದರು, ಕಾಂಗ್ರೆಸ್ ಅಭ್ಯರ್ಥಿ ದಳವಾಯಿ 19,000 ಮತಗಳನ್ನು ಪಡೆದಿದ್ದರು. ದಳವಾಯಿ ಹಾಗೂ ನಿರಾಣಿ ಪಡೆದ ಮತಗಳೆಲ್ಲವೂ ಕಾಂಗ್ರೆಸ್ ನದ್ದೇ ಆಗಿತ್ತು. ಬಿಜೆಪಿ ಅಭ್ಯರ್ಥಿಗಳಿಗೆ ಬಿಜೆಪಿ ಪರದವರೇ ಮತ ಹಾಕಿದ್ದಾರೆಂಬುದು ತಪ್ಪು ತಿಳುವಳಿಕೆ. ಪ್ರಸ್ತುತ ಬಿಜೆಪಿ ವಿರುದ್ಧ ಸ್ಪರ್ಧೆ ನಡೆಯುತ್ತಿದ್ದು, ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ. 
ಜನರು ಕಾಂಗ್ರೆಸ್'ಗೆ ಮತವೇಕೆ ಹಾಕಬೇಕು? 
2013ರ ಚುನಾವಣೆ ವೇಳೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದ 365 ಭರವಸೆಗಳನ್ನೂ ಈಡೇರಿಸಲಾಗಿದೆ. ಕಾಂಗ್ರೆಸ್'ಗೆ ಮತ ಹಾಕದಿದ್ದಕ್ಕೆ ಜನರು ಇದೀಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಜಮಖಂಡಿಯಲ್ಲಿ ಕಾಂಗ್ರೆಸ್ ವರ್ಚಸ್ಸು ಹಾಳು ಮಾಡಲು ಬಿಜೆಪಿ ಕಾರ್ಯಕರ್ತರು ಸಾಕಷ್ಟು ಯತ್ನಗಳನ್ನು ನಡೆಸುತ್ತಿದ್ದಾರೆ. ಬಿಜೆಪಿ ನಾಯಕರೇ ತಮ್ಮ ಅಭ್ಯರ್ಥಿ ವಿರುದ್ಧವಿದ್ದಾರೆ. 
ಮೋದಿ ಅಲೆ ಹಾಗೂ ಜಾತಿ ವಿಚಾರ ಬಿಜೆಪಿಗೆ ಲಾಭವಾಗಲಿದೆಯೇ? 
ಮೋದಿ ಅಲೆ ಕೆಲಸಕ್ಕೆ ಬರುವುದಿಲ್ಲ. 2013ರ ಚುನಾವಣೆ ವೇಳೆ ಸಾಕಷ್ಟು ರ್ಯಾಲಿಗಳನ್ನು ನಡೆಸಿದರೂ ನನ್ನ ತಂದೆಯವರೇ ಗೆಲವು ಸಾಧಿಸಿದ್ದರು. ಜಮಖಂಡಿಯಲ್ಲಿರುವ ಲಿಂಗಾಯತರು ವಿಭಜನೆಗೊಂಡಿಲ್ಲ. ತಮ್ಮ ಧರ್ಮಕ್ಕೆ ಸಂಬಂಧಪಟ್ಟವರಿಗೆ ಜನರು ಮತ ಹಾಕಲಿದ್ದಾರೆ. 
ಚುನಾವಣೆಯಲ್ಲಿ ನೀವು ಗೆದ್ದಿದ್ದೇ ಆದರೆ, ನಿಮ್ಮ ಪ್ರಮುಖ ಆದ್ಯತೆ ಯಾವುದಕ್ಕೆ? 
ಮರಿಗುಡ್ಡಿ-ಗಲ್ಗಲಿ ನೀರಾವರಿ ಯೋಜನೆ. ಈ ಯೋಜನೆ 9 ಹಳ್ಳಿಗಳಿಗೆ ಸಹಾಯಕವಾಗಲಿದೆ. ಇದಕ್ಕೆ ನಾನು ಪ್ರಮುಖ ಆದ್ಯತೆಯನ್ನು ನೀಡುತ್ತೇನೆ. 250 ಹಾಸಿಗೆಯನ್ನೊಳಗೊಂಡ ಆಸ್ಪತ್ರೆ ನಿರ್ಮಾಣ ಮಾಡುವುದು ನನ್ನ ತಂದೆಯ ಕನಸಾಗಿದೆ. ಅದನ್ನು ಪೂರ್ಣಗೊಳಿಸುತ್ತೇನೆ. ಚುನಾವಣೆಗೂ ಮುನ್ನವೇ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ರೂ.40 ಕೋಟಿ ನೀಡುವಂತೆ ಈಗಾಗಲೇ ಸಿಎಂ ಕುಮಾರಸ್ವಾಮಿಯವರ ಬಳಿ ಮನವಿ ಮಾಡಿಕೊಂಡಿದ್ದೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ; ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ; BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT