ಕುಮಾರಸ್ವಾಮಿ 
ರಾಜಕೀಯ

ನಾನೊಬ್ಬ ಸೂಕ್ಷ್ಮ ಮನಸಿನ ವ್ಯಕ್ತಿ, ನನ್ನ ವಿರುದ್ಧ ಅಪಪ್ರಚಾರ ಸಹಿಸಲಾಗದೆ ಭಾವುಕನಾಗುತ್ತೇನೆ: ಕುಮಾರಸ್ವಾಮಿ

ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಶಿವಮೊಗ್ಗದಲ್ಲಿ ಸಿಎಂ ಕುಮಾರ ಸ್ವಾಮಿ ಆಕ್ರಮಣಕಾರಿ ಪ್ರಚಾರ ಕೈಗೊಂಡಿದ್ದಾರೆ. ಮಧು ಬಂಗಾರಪ್ಪ ಪರ ಕಾಂಗ್ರೆಸ್...

ಶಿವಮೊಗ್ಗ: ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಶಿವಮೊಗ್ಗದಲ್ಲಿ ಸಿಎಂ ಕುಮಾರ ಸ್ವಾಮಿ ಆಕ್ರಮಣಕಾರಿ ಪ್ರಚಾರ ಕೈಗೊಂಡಿದ್ದಾರೆ. ಮಧು ಬಂಗಾರಪ್ಪ ಪರ ಕಾಂಗ್ರೆಸ್ ಕೂಡ ಪ್ರತಾರ ನಡೆಸುತ್ತಿದೆ.,ತಳ ಮಟ್ಟದ ಕಾರ್ಯಕರ್ತರ ನಡುವಿನ ಭಿನ್ನಾಭ್ರಿಯ ಬಗೆಹರಿಸಲು ಸ್ವಲ್ಪ ಸಮಾಯಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಸಿಎಂ ಕುಮಾರ ಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಪ್ರ: ಸದ್ಯ ನಡೆಯುತ್ತಿರು ಉಪ ಚುನಾವಣೆ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರಲಿದಯೇ?
ಉಪ ಚುನಾವಣೆ ಸಮ್ಮಿಶ್ರ ಸರ್ಕಾರಗ ಸಾಮರ್ಥ್ಯ ತೊರುತ್ತದೆ, ಇದು 2019ರ ಲೋಕಸಭೆ ಚುನಾವಣೆ.ದಿಕ್ಸೂಚಿಯಾಗಲಿದೆ, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದಷ್ಠೇ ನಮ್ಮ ಉದ್ದೇಶ.
ಪ್ರ:ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪ್ರಚಾರದ ಯೋಜನೆ ಏನು?
ಜಿಲ್ಲೆಯ 8 ಲೋಕಸಭೆ ಕ್ಷೇತ್ರಗಳಲ್ಲೂ ಪನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೋಳ್ಳುತ್ತೇನೆ, ಮಂಡ್ಯಕ್ಕೆ ನನ್ನ ಅವಶ್ಯಕತೆಯಿರಲಿಲ್ಲ, ಆದರೂ 2 ದಿನ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ, ಬುಧವಾರ ಬಳ್ಳಾರಿಗೆ ತೆರಳಿ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ.
ಪ್ರ: 2019ರ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವರೇ?
ಹೌದು, ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದರು, ಅದರಂತೆ ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ ಸ್ಪರ್ಧಿಸಿದ್ದಾರೆ. ಹಾಗೆಯೇ 2019ರ ಲೋಕಸಭೆ ಚುನಾವಣೆಗೂ ಕಾಂಗ್ರೆಸ್ ತನ್ನ ಬೆಂಬಲ ವಿಸ್ತರಿಸಲಿದೆ.
ಪ್ರ: ಕಾರ್ಯಕರ್ತರನ್ನು ಒಗ್ಗೂಡಿಸಲು ಹಿರಿಯ ನಾಯಕರು ವಿಫಲರಾಗಿದ್ದಾರೆಯೇ?
ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಎರಡು ಪಕ್ಷದ ಹಿರಿಯ ನಾಯಕರು ಒಗ್ಗಟ್ಟಾಗಿ ಪ್ರಚಾರದಲ್ಲಿ ಭಾಗವಹಿಸಿದ್ದಾರೆ, ಮಾಜಿ ಪಿಎಂ ಪ್ರಧಾನಮಂತ್ರಿ, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೂಡಿ ಪ್ರಚಾರ ಮಾಡುತ್ತಿದ್ದಾರೆ, ಸ್ಥಳೀಯ ಮಟ್ಟದಲ್ಲಿ ಕೆಲ ಸಮಸ್ಯೆಗಳಿವೆ, ಅದನ್ನು ಪರಿಹರಿಸಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ,
ಪ್ರ; ಉಪ ಚುನಾವಣೆ ಘೋಷಣೆಯಾದ ಮೇಲೆ ಸಮ್ಮಿಶ್ರ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ.ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ":?
ಅದು ಸತ್ಯವಲ್ಲ, ಪ್ರಚಾರ ಕಾರ್ಯ ಆರಂಭಿಸುವುದಕ್ಕೆ ಮೊದಲೇ ಅಧಿಕಾರಿಗಳ ಜೊತೆ ಮೂರು ಸಭೆ ನಡೆಸಿದ್ದೇನೆ, ಎಲ್ಲಾ ಸರ್ಕಾರಿ ಕೆಲಸಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿವೆ, ಸರ್ಕಾರ ಉತ್ತಮವಾಗಿ ನಯವನಾಗಿ ನಡೆದುಕೊಂಡು ಹೋಗುತ್ತಿದೆ. ಒಂದು ವೇಳೆ ಸಚಿವರು ವಿದೇಶ ಪ್ರವಾಸಕ್ಕೆ ಹೋದರೆ, ಅವರ ಇಲಾಖೆ ಕರ್ತವ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಪ್ರ; ಇತ್ತೀಚಗೆ ರ್ಯಾಲಿ ವೇಳೆ  ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವುದಾಗಿ ಘೋಷಿಸಿದ್ದೀರಿ, ಇದ ನೀತಿ ಸಂಹಿತೆ ಉಲ್ಲಂಘನೆಯಾಗಲಿಲ್ಲವೇ?
ನಾನು ಘೋಷಿಸಿದ ಎಲ್ಲಾ ಕಾರ್ಯಕ್ರ ಹಾಗೂ ಯೋಜನೆಗಳು 5 ತಿಂಗಳ ಹಿಂದೆ ಮಂಡಿಸಿದ ಬಜೆಟ್ ಯೋಜನೆಗಳಾಗಿವೆ,ಯಾವುದೇ ಹೊಸ ಯೋಜನೆ ನಾನು ಘೋಷಿಸಿಲ್ಲ.
ಪ್ರ:  ಪದೇ ಪದೇ ಏಕೆ ಭಾವುಕರಾಗುತ್ತೀರಿ?
ನಾನೊಬ್ಬ ಸೂಕ್ಷ್ಮ ಮನಸ್ಸಿನ ವ್ಯಕ್ತಿ, ನನ್ನ ವಿರುದ್ಧದ ಯಾವುದೇ ಅಪಪ್ರತಾರ ಸಹಿಸಲಾಗದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!