ರಾಜಕೀಯ

ಗೋಕಾಕ್‌ನಲ್ಲಿ ಗೆದ್ದಿರುವ 30 ಸ್ವತಂತ್ರ ಅಭ್ಯರ್ಥಿಗಳು ಕಾಂಗ್ರೆಸ್ಸಿಗರು: ರಮೇಶ್ ಜಾರಕಿಹೊಳಿ

Vishwanath S
ಗೋಕಾಕ್: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಆಶ್ಚರ್ಯಕರ ಎಂಬಂತೆ ಗೋಕಾಕ್ ಪುರಸಭೆ ಚುನಾವಣೆಯಲ್ಲಿ 31 ಸ್ಥಾನಗಳ ಪೈಕಿ 30 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಂದು ಕಾಂಗ್ರೆಸ್ ಅಥವಾ ಬಿಜೆಪಿ ಮೈಲುಗೈ ಸಾಧಿಸುತ್ತಿವೆ. ಆದರೆ ಗೋಕಾಕ್ ನಲ್ಲಿ ಮಾತ್ರ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ 1 ಸ್ಥಾನ ಪಡೆದರೇ ಕಾಂಗ್ರೆಸ್ ಮಾತ್ರ ಖಾತೆ ತೆರೆಯುವಲ್ಲಿ ವಿಫಲವಾಗಿದೆ. 
ಇನ್ನು ಗೋಕಾಕ್ ಪುರಸಭೆ ಚುನಾವಣೆಯಲ್ಲಿ ಗೆದ್ದಿರುವ 30 ಸ್ವತಂತ್ರ ಅಭ್ಯರ್ಥಿಗಳು ಕಾಂಗ್ರೆಸ್ಸಿಗರು ಎಂದು ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇನ್ನು ಕಳೆದ 25 ವರ್ಷಗಳಿಂದ ಜಾರಕಿಹೊಳಿ ಈ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ಬಂದಿದ್ದರು. 
ಆದರೆ ಈ ಬಾರಿ ಅವರಿಗೆ ಪಕ್ಷ ಬಿ-ಫಾರ್ಮ್ ನೀಡಿರಲಿಲ್ಲ. ಆದರೂ ಅವರು ಕಾಂಗ್ರೆಸ್ಸಿಗೆ ಬೆಂಬಲ ನೀಡಲಿದ್ದಾರೆ. ಇನ್ನು ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿ-ಫಾರ್ಮ್ ಸಿಕ್ಕಿದವರು ಹಾಗೂ ಫಾರ್ಮ್ ಸಿಗದರು ಸ್ಪರ್ಧಿಸಿದ್ದರು. ಯಾರಿಗೆ ಬಿ-ಫಾರ್ಮ್ ಸಿಕ್ಕಿರಲಿಲ್ಲವೋ ಅವರೆಲ್ಲಾ ಸ್ವತಂತ್ರರಾಗಿ ಸ್ಪರ್ಧಿಸಿದ್ದರಷ್ಟೆ ಎಂದು ರಮೇಶ್ ಜಾರಕಿಹೋಳಿ ಹೇಳಿದ್ದಾರೆ.ಯ 
ಇನ್ನು ಗೋಕಾಕ್ ನಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು ಬಿಜೆಪಿ ಮಾತ್ರ ಒಂದು ಸೀಟು ಗೆಲ್ಲುವಲ್ಲಿ ಸಫಲವಾಗಿದೆ. ಗೋಕಾಕ್ ನಲ್ಲಿ ಯಾವುದೇ ಪಕ್ಷಗಳನ್ನು ನೋಡಿಕೊಂಡು ಮತದಾರರು ಮತ ಚಲಾಯಿಸುವುದಿಲ್ಲ. ಬದಲಿಗೆ ಅಭ್ಯರ್ಥಿ ಸಾಮರ್ಥ್ಯವನ್ನು ನೋಡಿ ಮತ ಚಲಾಯಿಸುತ್ತಾರೆ.
SCROLL FOR NEXT