ರಾಜಕೀಯ

ವಿಧಾನ ಪರಿಷತ್ ಉಪ ಚುನಾವಣೆ: ವಿಜಯಪುರ, ಬಾಗಲಕೋಟೆಯಲ್ಲಿ ಮತದಾನ ಪ್ರಾರಂಭ

Raghavendra Adiga
ವಿಜಯಪುರ: ವಿಧಾನ ಪರಿಷತ್ ಉಪ ಚುನಾವಣೆಗಾಗಿ ಇಂದು ವಿಜಯಪುರ ಹಾಗೂ ಬಾಗಲ್ಕೋಟೆಗಳಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ.
ಬೆಳಿಗ್ಗೆ ಎಂಟಕ್ಕೆ ಮತದಾನ ಪ್ರಾರಂಭವಾಗಿದ್ದು ಸಂಜೆ ನಾಲ್ಕರವರೀಗೆ ನಡೆಯಲಿದೆ. ಎರಡೂ ಜಿಲ್ಲೆಗಳಲ್ಲಿ ಒತ್ಟು 8237 ಮತದಾರರಿದ್ದು  7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಒತ್ಟಾರೆ 38 ಮತಗಟ್ಟೆಗಳಿದ್ದು 16 ಅತಿ ಸೂಕ್ಷ್ಮ, 14 ಸೂಕ್ಷ್ಮ, 8 ಸಾಧಾರಣ ಮತಗಟ್ಟೆಗಳಿದೆ. 
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಬಳಿಕ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಮೈತ್ರಿಕೂಟದ ಅಭ್ಯರ್ಥಿಯಾಗಿ ಎಂ.ಬಿ. ಪಾಟೀಲ್‌ ಸಹೋದರ ಸುನೀಲ್‌ ಗೌಡ ಕಣದಲ್ಲಿದ್ದರೆ ಬಿಜೆಪಿ ಅಭ್ಯರ್ಥಿಯಾಗಿ ಗೂಳಪ್ಪ ಶಟಗಾರ ಸ್ಪರ್ಧೆಯಲ್ಲಿದ್ದಾರೆ.
SCROLL FOR NEXT