ರಾಜಕೀಯ

ಇದು ಬೆಳಗಾವಿ ರಾಜಕೀಯ, ಹೇಗೆ ಸಿಎಂ ಮಾಡಬೇಕು, ಹೇಗೆ ಪದವಿಯಿಂದ ಇಳಿಸಬೇಕು ಎಂಬುದು ಗೊತ್ತು: ಕೋರೆ

Shilpa D
ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಜಂಗೀ ಕುಸ್ತಿ ಇಡೀ ರಾಜ್ಯದ ಗಮನ ಸೆಳೆದಿದೆ, ಈ ವೇಳೆ ಅವರ ಜಗಳದಲ್ಲಿ ತಮ್ಮ ಹೆಸರನ್ನು ಏಕೆ ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಬಿಜೆಪಿ ಸಂಸದ ಪ್ರಭಾಕರ ಕೋರೆ ಪ್ರಶ್ನಿಸಿದ್ದಾರೆ, 
ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಜಗಳ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಅದರ ಬಗ್ಗೆ ನನಗೆ ಸರಿಯಾದ ಮಾಹಿತಿಯಿಲ್ಲ,  ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಎಳೆದು ತರುತ್ತಿರುವುದು, ಸರಿ ತೋರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ,
ನಾನು ಮತ್ತು ಲಕ್ಷ್ಮಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ನನ್ನ ಹೆಸರನ್ನು ಮಧ್ಯೆ ತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹೇಗೆ ಮುಖ್ಯಮಂತ್ರಿ ಮಾಡಬೇಕು ಎಂಬುದು ನಮಗೆ ಗೊತ್ತು. ಜೊತೆಗೆ ಅವರನ್ನು ಹೇಗೆ ಕುರ್ಚಿಯಿಂದ ಕೆಳಗಿಳಿಸಬೇಕು ಎಂಬುದರ ಬಗ್ಗೆಯೂ ಗೊತ್ತು ಎಂದು ಹೇಳಿದ್ದಾರೆ. ಇದು ಬೆಳಗಾವಿ ರಾಜಕಿಯ, ವಿರೇಂದ್ರ  ಪಾಟೀಲ್ ಅವರನ್ನು ಹೇಗೆ ಸಿಎಂ ಮಾಡಿದ್ದರು, ಜೊತೆಗೆ ಅವರನ್ನು ಹೇಗೆ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದರು ಎಂಬುದು ಗೊತ್ತು.
ದುರಾದೃಷ್ಟ ವಶಾತ್, ಬೆಳಗಾವಿಯಿಂದ ಇರುವರೆಗೂ ಯಾರೊಬ್ಬರು ಮುಖ್ಯಮಂತ್ರಿಯಾಗಿಲ್ಲ ಎಂದು ಹೇಳಿದ್ದಾರೆ. ಅವಕಾಶಕ್ಕಾಗಿ ನಾವು ಕಾಯುತ್ತಿದ್ದೇವೆ, ಜಾರಕಿ ಹೊಳಿ ಮತ್ತು ಹೆಬ್ಬಾಳ್ಕರ್ ಸದ್ಯ ನಡೆಯುತ್ತಿರಪುವ ಕದನದಲ್ಲಿ ಹೇಗೆ ಗೆಲ್ಲುತ್ತಾರೆ  ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
SCROLL FOR NEXT