ರಾಜಕೀಯ

ಸಹಕಾರ ಸಂಸ್ಥೆಗಳ ಮೇಲೆ 4 ದಶಕಗಳ ಹಿಡಿತ; ಹೆಬ್ಬಾಳ್ಕರ್ ಮಧ್ಯಪ್ರವೇಶ: ಜಾರಕಿಹೊಳಿ ಸಹೋದರರ 'ಅಹಂ'ಗೆ ಪೆಟ್ಟು!

Shilpa D
ಬೆಂಗಳೂರು: ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಅವಿರೋಧವಾಗಿ ನಡೆದಿದ್ದು, ಎರಡು ಗುಂಪುಗಳ ಕದನ ಸದ್ಯ ತಣ್ಣಗಾಗಿದೆ, ಆದರೆ ಇದಕ್ಕೆ ಕಾಂಗ್ರೆಸ್ ಮುಂದೊಂದು ದಿನ ಭಾರೀ ಬೆಲೆ ತೆರಬೇಕಾಗಿದೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.
ಸ್ಥಳೀಯ ಮಟ್ಟದ ಬ್ಯಾಂಕ್ ಚುನಾವಣೆ ಸಮಸ್ಯೆ ಬಗೆಹರಿಸಲು ಕೇಂದ್ರ ಕಾಂಗ್ರೆಸ್ ನಾಯಕರು ಮದ್ಯ ಪ್ರವೇಶಿಸಬೇಕಾಯಿಕು,  ಎಲ್ಲರನ್ನು ಸಮಾಧಾನ ಪಡಿಸುವ ನಿಟ್ಟಿನಲಿಲ್ ಕಾಂಗ್ರೆಸ್ ಹೈಕಮಾಂಡ್ ತಂತ್ರ ರೂಪಿಸಬೇಕಾಯಿತು. ಸ್ಥಳೀಯ ಸಹಕಾರ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಎರಡು ಗುಂಪುಗಳು ತಮ್ಮ ಪ್ರತಿಷ್ಛೆಯನ್ನೇ ಪಣಕ್ಕಿಟ್ಟಿದ್ದವು. ಆದರೆ ಪ್ರಭಾವಿ ನಾಯಕರ ಮಧ್ಯಸ್ಥಿಕೆಯಿಂದ ಸದ್ಯ ಬ್ಯಾಂಕ್ ಚುನಾವಣೆ ಕದನ ತಣ್ಣಗಾಗಿದೆ, 
ಈ ಹಣಕಾಸು ಸಂಸ್ಥೆಗಳ ಮೇಲೆ ರಾಜಕಾರಣಿಗಳು ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಾರೆ, ಸಹಕಾರ ಸೊಸೈಟಿ ಹಾಗೂ ಪಿಎಲ್ ಡಿ ಬ್ಯಾಂಕ್ ಗಳ ಮೇಲೆ ತಮ್ಮ ಪ್ರಭಾವ ಇದ್ದರೆ ಗ್ರಾಮೀಣ ಆರ್ಥಿಕ ವ್ಯವಸ್ಥೆ ತಮ್ಮ ಹಿಡಿತದಲ್ಲಿರುತ್ತದೆ ಎಂಬುದು ರಾಜಕಾರಣಿಗಳ ಬಯಕೆ.  ಹೀಗಾಗಿ ಪಿಎಲ್ ಡಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಪ್ರಭಾವಿ ಕುಟುಂಬಗಳು ಹಾಗೂ ರಾಜಕಾರಣಿಗಳು ಸೆಣಸಾಡುತ್ತಾರೆ.
ಪಿಎಲ್ ಡಿ ಬ್ಯಾಂಕ್ ದೊಡ್ಡ ಮಟ್ಟದ ರೈತರಿಗೆ ದೀರ್ಘಾವಧಿ ಸಾಲ ನೀಡುತ್ತವೆ,  ಇದರಿಂದ ಅವುಗಳಿಗೆ ಹೆಚ್ಚಿನ ಲಾಭವಾಗುತ್ತದೆ,  ಸಾಲ ಪಡೆದ ರೈತ ಬ್ಯಾಂಕ್ ಹಿಡಿತದಲ್ಲಿರುತ್ತಾನೆ, 
ಕಳೆದ ನಾಲ್ಕು ದಶಕಗಳಿಂದ ಬಾಂಬೆ ಕರ್ನಾಟಕ ಭಾಗದಲ್ಲಿರುವ ಸಹಕಾರ ಸಂಸ್ಥೆಗಳು ಸಕ್ಕರೆ  ಕಾರ್ಖಾನೆಗಳ ಮೇಲೆ ಜಾರಕಿಹೊಳಿ ಸಹೋದರರು ತಮ್ಮ ಪಾರುಪತ್ಯ ಬಿಗಿಗೊಳಿಸಲು ಹೋರಾಟ ನಡೆಸುತ್ತಲೇ ಬಂದಿದ್ದಾರೆ, ಆದರೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯ ಪ್ರವೇಶ ಎರಡು ಬಣಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ,
ಯಾವುದೇ ಕಾರಣವಿಲ್ಲದೇ ಇದನ್ನು ಪ್ರತಿಷ್ಠಿತ ಹೋರಾಟ ಎಂದು ಹೇಳಲಾಗುವುದಿಲ್ಲ,  ಬ್ಯಾಂಕ್ ಗಳ ಮೇಲೆ ನಿಯಂತ್ರಣವಿದ್ದರೇ ರಾಜಕೀಯವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಈ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವ ಮಂದಿ ಬೇರೆಯವರಿಗೆ ಸಹಾಯ ಮಾಡಬಹುದಾಗಿದೆ, 
ಒಮ್ಮೆ ನೀವು ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿ ಅಧಿಕಾರ ಪಡೆದುಕೊಂಡರೇ ಸಾವಿರಾರು ರೈತರಿಗೆ ಸಹಾಯ ಮಾಡಬಹುದು, ಅದರಿಂದ ಪ್ರಬಲ ವೋಟ್ ಬ್ಯಾಂಕ್ ನಿಮ್ಮದಾಗುತ್ತದೆ ಎಂದು ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ಹೇಳಿದ್ದಾರೆ.
ಈ ಬ್ಯಾಂಕ್ ಗಳಲ್ಲಿ ದೊಡ್ಡ ಮಟ್ಟದ ರೈತರಿಗೆ ಸಾಲ ನೀಡಲಾಗುತ್ತದೆ, ಸಾಲ ಕೊಡಿಸಲು ರಾಜಕಾರಣಿಗಳು ಸಹಾಯ ಮಾಡಿರುತ್ತಾರೆ, ಹೀಗಾಗಿ  ಮತದ ರೂಪದಲ್ಲಿ ಅವರಿಗೆ ಸಹಾಯಕ್ಕೆ ಪ್ರತಿಲಾಭ ನೀಡಬೇಕಾಗುತ್ತದೆ.
ಕರ್ನಾಟಕ ರಾಜ್ಯ ಸಹಕಾರ ಇಲಾಖೆ ರಾಜ್ಯಾದ್ಯಂತ  175 ಪಿಎಲ್ ಡಿ ಬ್ಯಾಂಕ್ ಹೊಂದಿವೆ.
ಬೆಳಗಾವಿಯಲ್ಲಿ 10,  ಉತ್ತರ ಕರ್ನಾಟಕ 11, ಈ ಎಲ್ಲಾ ಬ್ಯಾಂಕ್ ಗಳ ಮೇಲೆ ಜಾರಕಿಹೊಳಿ ತಮ್ಮ ಪ್ರಾಬಲ್ಯ ಹೊಂದಿದ್ದಾರೆ, ಲಕ್ಷ್ಮಿ ಹೆಬ್ಬಾಳ್ಕರ್  ಮದ್ಯಸ್ಥಿಕೆ  ಜಾರಕಿಕೊಳಿ ಸಹೋದರರಿಗೆ ಪೆಟ್ಟು ನೀಡಿದ್ದು, ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ ಎಂದು  ಪ್ರೊ. ಪಣಿ ಹೇಳಿದ್ದಾರೆ.
SCROLL FOR NEXT