ಕರ್ನಾಟಕ ಶಾಸನ ಸಭೆ 
ರಾಜಕೀಯ

ಇಡಿ ದೇಶದಲ್ಲೇ ಕರ್ನಾಟಕದ ಶಾಸಕರು ಆಗರ್ಭ ಶ್ರೀಮಂತರಂತೆ; ಅವರ ವಾರ್ಷಿಕ ಆದಾಯವೆಷ್ಟು?

ದೇಶದಲ್ಲೇ ಕರ್ನಾಟಕ ಶಾಸಕರ ವಾರ್ಷಿಕ ಆದಾಯ ಅತಿ ಹೆಚ್ಚು ಇದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ ....

ನವದೆಹಲಿ: ದೇಶದಲ್ಲೇ ಕರ್ನಾಟಕ ಶಾಸಕರ ವಾರ್ಷಿಕ ಆದಾಯ ಅತಿ ಹೆಚ್ಚು ಇದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ 1.11 ಕೋಟಿ ರು. ಆಗಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. 
ಡೆಮಾಕ್ರೆಟಿಕ್ ರಿಫಾರ್ಮ್ಸ್ ಅಸೋಸಿಯೇಶನ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ ಸಂಸ್ಥೆಗಳ ಜಂಟಿ ಅಧ್ಯಯನದಿಂದ ಈ ಕುತೂಹಲಕರ ಅಂಶ ಬೆಳಕಿಗೆ ಬಂದಿದೆ. ದೇಶದ ಒಟ್ಟಾರೆ ಶಾಸಕರ ವಾರ್ಷಿಕ ಆದಾಯ 24.59 ಲಕ್ಷ ರುಪಾಯಿ ಇದೆ. 
ಕರ್ನಾಟಕಕ್ಕೆ ಹೋಲಿಸಿದರೆ ಛತ್ತೀಸ್‌ಗಢ ಶಾಸಕರ ವಾರ್ಷಿಕ ಆದಾಯ ನಗಣ್ಯವಾಗಿದ್ದು, ವಾರ್ಷಿಕ 5.4 ಲಕ್ಷ ರು. ಸರಾಸರಿ ಆದಾಯ ಹೊಂದುವ ಮೂಲಕ ದೇಶದಲ್ಲೇ ಅತಿ ಕನಿಷ್ಠ ಆದಾಯದ ಶಾಸಕರಾಗಿದ್ದಾರೆ. ಅಧ್ಯಯನದಲ್ಲಿ ಕರ್ನಾಟಕದ 224 ಶಾಸಕರ ಪೈಕಿ 203 ಜನರ  ಆದಾಯವನ್ನು ಅಳೆಯಲಾಗಿದ್ದು, ಇವರ ಸರಾಸರಿ ವಾರ್ಷಿಕ ಆದಾಯ 111.4 ಲಕ್ಷ (1.11ಕೋಟಿ ರುಪಾಯಿ) ಆಗಿದೆ.
ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯವಿದ್ದು, 256 ಶಾಸಕರು  ತಮ್ಮ ವಾರ್ಷಿಕ ಆದಾಯ 43.3 ಲಕ್ಷ ರು. ಎಂದು ಘೋಷಿಸಿದ್ದಾರೆ. ದೇಶದ ಒಟ್ಟಾರೆ 4086 ಹಾಲಿ ಶಾಸಕರ ಪೈಕಿ 3145 ಶಾಸಕರ ಸ್ವಘೋಷಿತ ಆಸ್ತಿ ವಿವರವನ್ನು  ವಿಶ್ಲೇಷಿಸಲಾಗಿದೆ. 941 ಶಾಸಕರು ಆಸ್ತಿಯನ್ನೇ ಘೋಷಿಸಿಕೊಂಡಿಲ್ಲ
ದೇಶದ ಒಟ್ಟು ಶಾಸಕರ ಪೈಕಿ ಕರ್ನಾಟಕ ಶಾಸಕರೇ ಅತೀ ಶ್ರೀಮಂತರು. ರಾಜ್ಯದ ಒಟ್ಟು ಶಾಸಕರ ಸರಾಸರಿ ವಾರ್ಷಿಕ ಆದಾಯ 1 ಕೋಟಿ 11 ಲಕ್ಷ ರೂ. ಅಂದ್ರೆ ಕರ್ನಾಟಕದ ಶಾಸಕರು ದೇಶದಲ್ಲೇ ಅತೀ ಶ್ರೀಮಂತರಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT