ಲಕ್ಷ್ಮಿ ಹೆಬ್ಬಾಳಕರ್ 
ರಾಜಕೀಯ

ಬಿಜೆಪಿಯಿಂದ ನನಗೆ ಸಚಿವ ಸ್ಥಾನ, 30 ಕೋಟಿ ರು. ಆಮಿಷ ನೀಡಲಾಗಿತ್ತು: ಲಕ್ಷ್ಮಿ ಹೆಬ್ಬಾಳಕರ್

ಬಿಜೆಪಿ ಮುಖಂಡರೊಬ್ಬರು ನನಗೆ ಕರೆ ಮಾಡಿ, ತಮ್ಮ ಪಕ್ಷ ಸೇರಿದಂತೆ ಸಚಿವ ಸ್ಥಾನ ಹಾಗೂ 30 ಕೋಟಿ ರುಪಾಯಿ...

ಬೆಳಗಾವಿ: ಬಿಜೆಪಿ ಮುಖಂಡರೊಬ್ಬರು ನನಗೆ ಕರೆ ಮಾಡಿ, ತಮ್ಮ ಪಕ್ಷ ಸೇರಿದಂತೆ ಸಚಿವ ಸ್ಥಾನ ಹಾಗೂ 30 ಕೋಟಿ ರುಪಾಯಿ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಅವರು ಶುಕ್ರವಾರ ಹೊಸ ಬಾಂಬ್‌ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್ ಅವರು, ನಾನು ಕಳೆದ ಮೇ 16 ಮತ್ತು 17ರಂದು ಹೈದರಾಬಾದ್ ನಲ್ಲಿದ್ದಾಗ ನನಗೆ ಬಿಜೆಪಿ ಮುಖಂಡರೊಬ್ಬರಿಂದ ಕರೆ ಬಂದಿತ್ತು. ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿ ಎಂದು ಆಹ್ವಾನ ನೀಡಿದರು ಎಂದು ಆರೋಪಿಸಿದ್ದಾರೆ. ಆದರೆ ಆಫ‌ರ್‌ ನೀಡಿದ ಬಿಜೆಪಿ ನಾಯಕರ ಹೆಸರು ಹೇಳಲು ನಿರಾಕರಿಸಿದರು. 
ನನ್ನ ಮತ್ತು ಬಿಜೆಪಿ ಮುಖಂಡರ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ನಾನು ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಕಳುಹಿಸಿಕೊಟ್ಟಿದ್ದೇನೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಆಪರೇಷನ್‌ ಕಮಲ ನಿಸರ್ಗಕ್ಕೆ ವಿರುದ್ಧವಾದದ್ದು ಎಂದ ಅವರು, ಬಿಜೆಪಿಯಿಂದ ಈಗಾಗಲೇ ಹಲವು ಶಾಸಕರಿಗೆ ಆಫ‌ರ್‌ ನೀಡಲಾಗಿತ್ತು, ನನ್ನನ್ನು ಸಂಪರ್ಕಿಸಿದ್ದರು. ಈ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ ಎಂದರು.
ಕೇಂದ್ರ ಸಚಿವರೊಬ್ಬರು ನನ್ನ ಸಹೋದರಿಗೆ ಮೂರು ಬಾರಿ ಕರೆ ಮಾಡಿ, ನನ್ನನ್ನು ಬಿಜೆಪಿಗೆ ಕರೆತರುವಂತೆ ಕೇಳಿಕೊಂಡಿದ್ದರು ಎಂದು ಲಕ್ಷ್ಮಿ ಹೆಬ್ಬಾಳಕರ್ ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!