ರಾಜಕೀಯ

ರಾಜಕೀಯ ಕುತಂತ್ರದಿಂದಾಗಿ ಮೂರು ಬಾರಿ ಸಿಎಂ ಆಗುವ ಅವಕಾಶ ಕೈ ತಪ್ಪಿತು: ಪರಮೇಶ್ವರ್

Shilpa D

ಕೊರಟಗೆರೆ: ರಾಜ್ಯದ ಜನರ ಸೇವೆ ಮಾಡಲು ನನಗೆ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶವಿತ್ತು ಎಂದು ಮಾಜಿ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನ ಕೊರಟಗೆರೆ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ರಾಜಕೀಯ ದೊಂಬರಾಟದ ನಡುವೆ ನನಗೆ ಸಿಎಂ ಆಗುವ ಅವಕಾಶ ಕೈತಪ್ಪಿದೆ ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ರಾಜ್ಯದ ಸರಕಾರಿ ಇಲಾಖೆಯ ಅಧಿಕಾರಿಗಳಿಗೆ ಉನ್ನತ ಸ್ಥಾನ ನೀಡಲು ಜಾತಿಯ ಲೆಕ್ಕಾಚಾರವೇ ಮುಖ್ಯಪಾತ್ರ ವಹಿಸುತ್ತದೆ. ಆಡಳಿತ ನಡೆಸುವ ರಾಜಕಾರಣಿಗಳ ಸಮುದಾಯಕ್ಕೆ ಮುಖ್ಯಸ್ಥಾನ ಕೊಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಸರಕಾರ ನಡೆಸುವ ರಾಜಕಾರಣಿಗಳ ಮನಸ್ಸು ಬದಲಾವಣೆ ಆದಾಗ ಮಾತ್ರ ಜಾತಿಯ ವ್ಯವಸ್ಥೆ ಬದಲಾಗಲು ಸಾಧ್ಯ ಎಂದು ಹೇಳಿದ ಜಿ.ಪರಮೇಶ್ವರ್ ಜಾತಿ ವ್ಯವಸ್ಥೆಯ ಕರಾಳತೆಯ ಕುರಿತು ಕಳವಳ ವ್ಯಕ್ತಪಡಿಸಿದರು.

ಇನ್ನು ರಾಜಕಾರಣಿಗಳ ಸಮುದಾಯಕ್ಕೆ ಮುಖ್ಯಸ್ಥಾನ ಕೊಡುತ್ತಿರುವುದು ದುರ್ದೈವವಾಗಿದೆ, ಸರ್ಕಾರ ನಡೆಸುವ ರಾಜಕಾರಣಿಗಳ ಮನಸ್ಸು ಬದಲಾವಣೆ ಆದರೆ ಮಾತ್ರ ಜಾತಿಯ ವ್ಯವಸ್ಥೆ ಬದಲಾಗಲು ಸಾಧ್ಯವಾಗುತ್ತದೆ ಎಂದು ಡಾ. ಜಿ ಪರಮೇಶ್ವರ್ ಅವರು ಕೊರಟಗೆರೆಯ ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ನೋವು ತೋಡಿಕೊಂಡ ಹಂಚಿಕೊಂಡಿದ್ದಾರೆ.

SCROLL FOR NEXT