ಅಶ್ವತ್ಥ ನಾರಾಯಣ 
ರಾಜಕೀಯ

ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಇದ್ದಂತೆ, ಬಿಜೆಪಿಗೆ ಅಶ್ವತ್ಥ ನಾರಾಯಣ: ಪಕ್ಷ ಸಂಘಟಿಸಲು 'ಶಾ' ತಂತ್ರ 

ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಮತ್ತು ಡಾ.ಸಿಎನ್ ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ  ನೇಮಕ ಮಾಡಿರುವ ವಿಷಯ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ....

ಬೆಂಗಳೂರು: ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಮತ್ತು ಡಾ.ಸಿಎನ್ ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ  ನೇಮಕ ಮಾಡಿರುವ ವಿಷಯ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಬಹಳ ಕಾಲದಿಂದ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತಿತ್ತು.ಹಾಗಾಗಿ  ಬಿಜೆಪಿ ಹೈ ಕಮಾಂಡ್ ತಮ್ಮ ತಂತ್ರಗಾರಿಕೆ ಬಳಸಿ ಪಕ್ಷ ಕಟ್ಟಲು ಈ ನಿರ್ಧಾರ ಕೈಗೊಂಡಿದೆ, ಇದೆಲ್ಲಾ ಪೂರ್ವ ನಿರ್ಧರಿತ ವಿಷಯವಾಗಿದೆ.ಬಿಜೆಪಿ ಹೈಕಮಾಂಡ್ ನಿರ್ದಾರದಿಂದಾಗಿ ಈಗಾಗಲೇ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ, ಆದರೆ ಅವರ ಕೂಗನ್ನು ಕೇಳುವವರು ಯಾರೂ ಇಲ್ಲ.

ಕಳೆದ ಆರು ವರ್ಷಗಳಲ್ಲಿ ಕರ್ನಾಟಕ ಬಿಜೆಪಿ ಘಟಕವು ಅಮಿತ್ ಷಾ ಅವರ  ಸಾಮರ್ಥ್ಯವನ್ನು ಎಂದಿಗೂ ನೋಡಲಿಲ್ಲ.  ಭವಿಷ್ಯದ ನಾಯಕರುಗಳನ್ನು ಬೆಳೆಸಲು ಮುಂದಾಗಿರುವ ಅಮಿತ್ ಶಾ ಸಂಪೂರ್ಣ ಹಿಡಿತ ಹೊಂದಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ತಿಳಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಇರುವಂತೆ ಬಿಜೆಪಿಯಲ್ಲಿ ಅಶ್ವತ್ಥ  ನಾರಾಯಣ ಇದ್ದಾರೆ, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಅಶ್ವತ್ಥ ನಾರಾಯಣ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂಬೈ-ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸದೃಢವಾಗಿ ಮುನ್ನಡೆಸಲು ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಲಾಗಿದೆ, ಹೀಗಾಗಿ ಉಮೇಶ್ ಕತ್ತಿ ಮತ್ತು ಜಾರಕಿಹೊಳಿ ಅವರನ್ನು ಬದಿಗೆ ತಳ್ಳಿ ಸವದಿಗೆ ಮಣೆ ಹಾಕಲಾಗಿದೆ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರನ್ನು ಡಿಸಿಎಂ ಮಾಡಿದ್ದಾರೆ. ಆದರೆ ಇದು ಹಿರಿಯರಿಗೆ ಆಘಾತ ಉಂಟು ಮಾಡಿದೆ, ಆದರೆ ಅಮಿತ್ ಶಾ ಆಕ್ರಮಣಕಾರಿ ನಾಯಕರುಗಳನ್ನು ಬೆಳೆಸಲು ಮುಂಚೂಣಿಗೆ ತರಲು ಮುಂದಾಗಿದ್ದಾರೆ. ಆಧರೆ ಇದು ಬಿಜೆಪಿಯನ್ನು ಬಲಹೀನಗೊಳಿಸಲಿದೆ ಎಂದು ಮೂರ್ತಿ ಅವರ ಅಭಿಪ್ರಾಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT