ರಾಜಕೀಯ

ರಾಷ್ಟ್ರಕ್ಕೆ ಒಂದೇ ಧ್ವಜ, ಎರಡೆರಡು ಬೇಡ; ನಾಡಧ್ವಜ ಬೇಡ ಎಂಬ ಸಿಟಿ ರವಿ ಹೇಳಿಕೆಗೆ ಕನ್ನಡಿಗರಿಂದ ಆಕ್ರೋಶ!

Vishwanath S

ಬೆಂಗಳೂರು: ರಾಷ್ಟ್ರಕ್ಕೆ ಒಂದೇ ಧ್ವಜ ಇರಲಿ. ಕರ್ನಾಟಕಕ್ಕೆ ಪ್ರತ್ಯೇಕವಾದ ಅಧಿಕೃತ ನಾಡ ಧ್ವಜದ ಅಗತ್ಯವಿಲ್ಲ ಎಂಬ ಸಚಿವ ಸಿಟಿ ರವಿ ಅವರ ಹೇಳಿಕೆಗೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ರವಿ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಡಧ್ವಜವನ್ನು ಸಾಂಸ್ಕೃತಿಕವಾಗಿ ಬಳಸಲು ಅವಕಾಶವಿದೆಯೇ ಹೊರತು ಸಾಂವಿಧಾನಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜ ಸಂಹಿತೆಯಲ್ಲಿ ಅವಕಾಶ ಇದೆ ಎಂದು ಹೇಳುವ ಮೂಲಕ ಪ್ರತ್ಯೇಕ ಕನ್ನಡ ನಾಡ ಧ್ವಜ ಪ್ರಸ್ತಾವನೆ ಕೈಬಿಟ್ಟಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. 

ಸಿಟಿ ರವಿ ಅವರ ಈ ಹೇಳಿಕೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು ಕನ್ನಡ ಬಾವುಟದ ಹಿರಿಮೆ ಗೊತ್ತಿಲ್ಲದ ಜನಪ್ರತಿನಿಧಿಗಳು ಯಾರೇ ಆಗಲಿ ರಾಜ್ಯ ಬಿಟ್ಟು ತೊಲಗಲಿ. ನೆಲ ಜಲಗಡಿ ಭಾಷೆ ಇವುಗಳ ಮೇಲೆ ಸ್ವಾಭಿಮಾನ ಇಲ್ಲದ ಬಿಜೆಪಿಯವರು ಮಾತ್ರ ಕನ್ನಡದ ಅಸ್ಮಿತೆಗೆ ಕನ್ನಡದ ಧ್ವಜಕ್ಕೆ ಅವಮಾನ ಮಾಡುವ ಆಲೋಚನೆ ಮಾಡಲು ಸಾಧ್ಯ ಎಂದು ಹಲವರು ಛೇಡಿಸಿದ್ದಾರೆ.

SCROLL FOR NEXT