ಸಂಗ್ರಹ ಚಿತ್ರ 
ರಾಜಕೀಯ

ಎಸ್ಆರ್ ವಿಶ್ವನಾಥ್ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಎಸ್ಆರ್ ವಿಶ್ವನಾಥ್ ಅವರನ್ನು ನೇಮಿಸಲಾಗಿದ್ದು, ಇವರಿಗೆ ಸಂಪುಟ ದರ್ಜೆ ನೀಡಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಎಸ್ಆರ್ ವಿಶ್ವನಾಥ್ ಅವರನ್ನು ನೇಮಿಸಲಾಗಿದ್ದು, ಇವರಿಗೆ ಸಂಪುಟ ದರ್ಜೆ ನೀಡಿ ಆದೇಶ ಹೊರಡಿಸಲಾಗಿದೆ.

ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನ ಗೊಂಡಿದ್ದ ವಿಶ್ವನಾಥ್ ಅವರನ್ನು ಈ ರೀತಿ ಮನವೊಲಿಸಲಾಗಿದೆ.  ಯಲಹಂಕ ಕ್ಷೇತ್ರದಿಂದ ಸತತ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಎಸ್.ಆರ್. ವಿಶ್ವನಾಥ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಈಗ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನೇಮಕ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಅತ್ಯಂತ ಪ್ರಭಾವಿ ಹುದ್ದೆಯಾಗಿದ್ದು, ಸಂಪುಟ ದರ್ಜೆಯ ಸ್ಥಾನಮಾನ ಈ ಹುದ್ದೆಗಿದೆ. ಶಾಸಕ ಎಸ್.ಆರ್ ವಿಶ್ವನಾಥ್ ಮೊದಲಿನಿಂದಲೂ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ಬಳಗದಲ್ಲಿದ್ದು, ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ ಬಿಜೆಪಿ ಶಾಸಕರಿಗೆ ತಮ್ಮ ಕ್ಷೇತ್ರದ ರೆಸಾರ್ಟ್‌ ನಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಶಾಸಕರು ಎಲ್ಲರು ಒಟ್ಟಾಗಿ ಇರುವಂತೆ ನೋಡಿಕೊಂಡು ರಾಜಕೀಯವಾಗಿ ಎಲ್ಲವನ್ನೂ ನಿಭಾಯಿಸಿದ್ದರು.

ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತಾದರೂ ಬೆಂಗಳೂರಿನಿಂದ ಈಗಾಗಲೇ ನಾಲ್ಕು ಮಂದಿ ಸಚಿವರಾಗಿರುವುದರಿಂದ ಮತ್ತೆ ಬೆಂಗಳೂರಿನ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಎಸ್.ಆರ್. ವಿಶ್ವನಾಥ್ ಅವರ ಮನವೊಲಿಸಿದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳ ಚುನಾವಣೆ: ರಾಜಕೀಯ ಪಕ್ಷಗಳ ಖರ್ಚು- ದೇಣಿಗೆ ಮಾಹಿತಿ ಬಹಿರಂಗ; ಆಡಳಿತಾರೂಢ ಬಿಜೆಪಿಗೆ ಬಂದಿದ್ದೆಷ್ಟು?

'ಚಿಂತೆ ಮಾಡುತ್ತ ಕೂರಬೇಡಿ'; ಟಾಕ್ಸಿಕ್ ಸೋಲು ಒಪ್ಪಿಕೊಂಡ ಯಶ್‌: ಆಪ್ತನ ಬಳಿ ರಾಕಿಂಗ್ ಸ್ಟಾರ್ ಹೇಳಿದ್ದೇನು?

Duleep Trophy: 'ತಗೋ... ತಗೋ..ಮೊದ್ಲು DRS ತಗೋ'.. ನಾಯಕ ಇಶಾನ್ ಕಿಶನ್ ಗೆ ದುಂಬಾಲು ಬಿದ್ದ 'ಸೂಪರ್ ಡೆಪ್ಯುಟಿ' Vaibhav Sooryavanshi, ಆಗಿದ್ದೇನು? Video

ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕನ ರಾಜೀನಾಮೆ; ಸುರಕ್ಷತಾ ಕಾರ್ಯನಿರ್ವಾಹಕರಿಂದಲೂ ಬೆಂಬಲ!

ಸೆಪ್ಟೆಂಬರ್ 12 ರಂದು ತಮಿಳುನಾಡಿನಾದ್ಯಂತ DMK ಪ್ರತಿಭಟನೆ! ಕಾರಣವೇನು ಗೊತ್ತಾ?