ರಾಜಕೀಯ

ಮಹಾರಾಷ್ಟ್ರದಂತೆ ಇಲ್ಲೂ ರಾಜಕೀಯ ಬೆಳವಣಿಗೆಗಳಾಗಬಹುದು: ಡಾ.ಜಿ.ಪರಮೇಶ್ವರ್

Shilpa D

ಬೆಂಗಳೂರು: ಹಣ, ಅಧಿಕಾರದ ಆಮಿಷದ‌ ಮೇಲೆ ರಚನೆಯಾಗಿರುವ ಬಿಜೆಪಿ ಸರ್ಕಾರದ ನಿಜವಾದ ಉದ್ದೇಶವೇನು?  ಎಂದು  ಕಾಂಗ್ರೆಸ್‌ನ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಉ್ದೇಶ ಜನರಿಗೆ ಸ್ಪಂದಿಸುವುದೋ ಅಥವಾ ಕೇವಲ ಅಧಿಕಾರಕ್ಕಾಗಿ ಶಾಸಕರ ಖರೀದಿ ಮಾಡುವುದೋ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಉಪಚುನಾವಣೆಯ ಬಳಿಕ ಮತ್ತೆ ಮೈತ್ರಿ ರಚನೆ ಬಗ್ಗೆ ತೀರ್ಮಾನಿಸಬೇಕಾಗಿದ್ದು ಕೆಪಿಸಿಸಿ ಅಲ್ಲ, ಎಲ್ಲಾ‌ ನಿರ್ಣಯಗಳು ಎಐಸಿಸಿ ನಾಯಕರಿಗೆ ಬಿಟ್ಟಿದ್ದು. ಮಧ್ಯಂತರ ಚುನಾವಣೆಗೆ ಹೋಗಲು ಯಾರೂ ಸಿದ್ಧವಿಲ್ಲ. ಮಹಾರಾಷ್ಟ್ರದಂತೆ ಇಲ್ಲೂ ಬೆಳವಣಿಗೆಗಳಾಗಬಹುದು ಎಂದರು.

ರಾಜ್ಯದ ಆಡಳಿತವನ್ನು ತೀರ್ಮಾನಿಸುವ ಗಂಭೀರವಾದ ಪ್ರಾಮುಖ್ಯತೆ ಇರುವ ಚುನಾವಣೆ ಇದು. ಮೈತ್ರಿ ಸರ್ಕಾರವನ್ನು ಪತನಗೊಳಿಸಿ‌ ಯಡಿಯೂರಪ್ಪ ಸರ್ಕಾರ ರಚಿಸಿದ್ದಾರೆ. ಅನರ್ಹರ ರಾಜೀನಾಮೆಯಿಂದ ಎದುರಾಗಿರುವ ಈ‌ ಉಪಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬೇಕು ಎಂದರು.

SCROLL FOR NEXT