ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ : ಮಿಂಚಿದ ಸಿದ್ದು , ಎಚ್ ಡಿಕೆ , ಯಡಿಯೂರಪ್ಪ .! 
ರಾಜಕೀಯ

ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ-ಮಿಂಚಿದ ಸಿದ್ದು , ಎಚ್ ಡಿಕೆ , ಯಡಿಯೂರಪ್ಪ .!

ಆಗ, ಈಗ ಎನ್ನುತ್ತಿದ್ದ ಉಪಚುನಾವಣೆ ಬಂದೇಬಿಟ್ಟಿದೆ. ಮತದಾರ ಮತಗಟ್ಟೆಗೆ ಹೋಗಲು ಇನ್ನು ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ. 

ಬೆಂಗಳೂರು: ಆಗ, ಈಗ ಎನ್ನುತ್ತಿದ್ದ ಉಪಚುನಾವಣೆ ಬಂದೇಬಿಟ್ಟಿದೆ. ಮತದಾರ ಮತಗಟ್ಟೆಗೆ ಹೋಗಲು ಇನ್ನು ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ.

ಗುರುವಾರ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಮುಕ್ತಾಯವಾಗಿದೆ. ಈ ಮೂಲಕ ರಾಜಕೀಯ ನಾಯಕರ ಆರೋಪ – ಪ್ರತ್ಯಾರೋಪ ಮತ್ತು ನಾಲಿಗೆಯ ಚಟುವಟಿಕೆಗಳಿಗೂ ಕಡಿವಾಣ ಬಿದ್ದಂತಾಗಿದೆ. 

ಬಹಿರಂಗ ಪ್ರಚಾರದ ಕಡೇ ದಿನ  ಹುಣಸೂರು, ಕೆಆರ್​ ಪೇಟೆಗಳಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೊಸಕೋಟೆಯಲ್ಲಿ ಡಿಕೆ ಶಿವಕುಮಾರ್​ ಸೇರಿ ಹಲವಾರು ಮುಖಂಡರು ತಮ್ಮ ಪಕ್ಷ್ದ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ.

ಗೋಕಾಕದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳೂ ಭಾರೀ ಪ್ರಚಾರದಲ್ಲಿ ಬಾಗವಹಿಸಿದ್ದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಪಾದಯಾತ್ರೆ ನಡೆಸುವ ಮೂಲಕ ಮತಯಾಚನೆ ಮಾಡಿದ್ದರು.ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಶಿವರಾಮ್ ಹೆಬ್ಬಾರ್ ರೋಡ್ ಶೋ ನಡೆಸಿದ್ದಾರೆ. 

ಇನ್ನು ಬಳ್ಳಾರಿಯ ಹೊಸ್ಪೇಟೆಯಲ್ಲಿ ಆನಂದ್ ಸಿಂಗ್ ಪರ ಸಚಿವ ಶ್ರೀರಾಮುಲು ಮನೆ ಮನೆಗೆ ತೆರಳಿ ಭರ್ಜರಿ ಮತಯಾಚನೆ ಂಆಡಿದ್ದರು.ಕೆಆರ್​ ಪೇಟೆಯಲ್ಲಿ ಮಾಜಿ ಸಚಿವ ರೇವಣ್ಣ, ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತಬೇಟೆ ಮಾಡಿದ್ದಾರೆ.

ಒಟ್ಟಾರೆ ಕಳೆದ 20 ದಿನಗಳಿಂದ ಉಪಚುನಾವಣೆಯ ಭರ್ಜರಿ ಪ್ರಚಾರದಲ್ಲಿ ತೊಡಗಿದ ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ಸಮರಕ್ಕೆ ತೆರೆ ಬಿದ್ದಿದ್ದು, ಮಂಗಳವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಘಟಾನುಘಟಿ ಮುಖಂಡರು ಕ್ಷೇತ್ರಗಳನ್ನು ತೊರೆದಿದ್ದಾರೆ.

ಇನ್ನೇನಿದ್ದರೂ ಮನೆ ಮನೆ ಪ್ರಚಾರ.ಬುಧವಾರ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡು ಕೊನೆಯ ಹಂತದ ಕಸರತ್ತು ನಡೆಸಲಿದ್ದಾರೆ. ಮತದಾರರ ಮನಗೆಲ್ಲಲು ಅಂತಿಮ ಪ್ರಯತ್ನವನ್ನು ಕ್ಷೇತ್ರದಲ್ಲಿ ಅಭ್ಯರ್ಥಿಗಳು ನಡೆಸಲಿದ್ದಾರೆ. ಗುರುವಾರ . 15 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!