ಸಂಗ್ರಹ ಚಿತ್ರ 
ರಾಜಕೀಯ

ಉಪ ಸಮರ: ಮತದಾರರ ಪ್ರಮಾಣದಿಂದ ಅಭ್ಯರ್ಥಿಗಳ ಅದೃಷ್ಟ ಹೆಚ್ಚಳ

ಬಹುನಿರೀಕ್ಷಿತ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಆರಂಭಗೊಂಡಿದ್ದು, ಈ ಉಪಚುನಾವಣೆ ಮೂರು ಪಕ್ಷಗಳ ಹಣೆಬರಹವನ್ನು ಬರೆಯಲಿದೆ. ಮತದಾರರ ಪ್ರಮಾಣ ಹೆಚ್ಚಾದಷ್ಟು ಅಭ್ಯರ್ಥಿಗಳ ಅದೃಷ್ಟ ಹೆಚ್ಚಾಗಲಿದ್ದು, ಈ ಹಿನ್ನಲೆಯಲ್ಲಿ ಮತದಾರರನ್ನು ಮತಕ್ಷೇತ್ರಕ್ಕೆ ಕರೆತರುವುದು ಮೂರೂ ಪಕ್ಷಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 

ಬೆಂಗಳೂರು: ಬಹುನಿರೀಕ್ಷಿತ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಆರಂಭಗೊಂಡಿದ್ದು, ಈ ಉಪಚುನಾವಣೆ ಮೂರು ಪಕ್ಷಗಳ ಹಣೆಬರಹವನ್ನು ಬರೆಯಲಿದೆ. ಮತದಾರರ ಪ್ರಮಾಣ ಹೆಚ್ಚಾದಷ್ಟು ಅಭ್ಯರ್ಥಿಗಳ ಅದೃಷ್ಟ ಹೆಚ್ಚಾಗಲಿದ್ದು, ಈ ಹಿನ್ನಲೆಯಲ್ಲಿ ಮತದಾರರನ್ನು ಮತಕ್ಷೇತ್ರಕ್ಕೆ ಕರೆತರುವುದು ಮೂರೂ ಪಕ್ಷಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 

2018ರ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಶೇ.72ರಷ್ಟು ಮತದಾನವಾಗಿತ್ತು. ಆದರೆ, ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ, ಉಪಚುನಾವಣೆಯಲ್ಲಿ ಮತದಾರರ ಶೇಕಡಾವಾರು ಕಡಿಮೆ ಇರುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡುವಂತೆ ಮೂರೂ ಪಕ್ಷಗಳು ಮನವಿ ಮಾಡಿಕೊಂಡಿವೆ. 

ಉಪ ಚುನಾವಣೆ ಹಿನ್ನೆಲೆಯಲ್ಲಿ ಪ್ರತೀಯೊಬ್ಬ ಮತದಾರನೂ ಮತದಾನ ಮಾಡುವಂತೆ ಮಾಡಲು 15 ಕ್ಷೇತ್ರಗಳ ಪಕ್ಷದ ನಾಯಕರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಮೂರು ಪಕ್ಷಗಳಲ್ಲಿ ಜೆಡಿಎಸ್ ಸುರಕ್ಷಿತವಾಗಿದೆ. ಬಿಜೆಪಿಗೆ ಹೋಲಿಕೆ ಮಾಡಿದರೆ, ಕಾಂಗ್ರೆಸ್ ಉತ್ತಮ ಸ್ಥಾನದಲ್ಲಿದೆ. ಒಂದು ವೇಳೆ ಮತದಾರರ ಸಂಖ್ಯೆ ಕಡಿಮೆಯಾಗಿದ್ದೇ ಆದರೆ, ದೊಡ್ಡ ಹೊಡೆತವನ್ನು ನೀಡಲಿದೆ. ಜೆಡಿಎಸ್ ಕಾರ್ಯಕರ್ತರು ಪ್ರಮುಖವಾಗಿ ಹಳೇ ಮೈಸೂರು ಭಾಗದಲ್ಲಿ ಅನರ್ಹ ಶಾಸಕರ ಬಗ್ಗೆ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬೀಳಲು ಅನರ್ಹ ಶಾಸಕರೇ ಕಾರಣವೆಂದು ಹೇಳಿ ಆಕ್ರೋಶ ವ್ಯಕ್ತವಾಗುವಂತೆ ಮಾಡುತ್ತಿದ್ದಾರೆಂದು ರಾಜಕೀಯ ತಜ್ಞ ಬಿ.ಎಸ್ ಮೂರ್ತಿ ಹೇಳಿದ್ದಾರೆ. 

ಹೆಚ್ಚಿದ ಕಾಂಗ್ರೆಸ್, ಜೆಡಿಎಸ್ ಬೆಂಬಲಿಗರು: ಬಿಜೆಪಿ ಸಂಕಷ್ಟ
ಮತದಾನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಬಿಜೆಪಿಗೆ ಇದು ಸವಾಲಾಗಿ ಪರಿಣಮಿಸಲಿದೆ. ಮತದಾರರ ಪ್ರಮಾಣ ಕಡಿಮೆಯಾದರೆ, ಅದು ಪಕ್ಷಕ್ಕೆ ಉತ್ತಮವಾಗಿರುವುದಿಲ್ಲ ಎಂಬುದನ್ನು ಬಿಜೆಪಿ ಕೂಡ ಒಪ್ಪಿಕೊಂಡಿದ್ದು, ಮತದಾರರ ಪ್ರಮಾಣ ಹೆಚ್ಚಳವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ. 

ಈ ನಡುವೆ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆಯವರು, ಅನರ್ಹ ಶಾಸಕರ ವಿರುದ್ಧ ಸಾಕಷ್ಟು ವಿರೋಧಗಳಿವೆ. ಜನರು ಅವರಿಗೆ ಪಾಠ ಕಲಿಸಲಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT