ರಾಜಕೀಯ

ವಯಸ್ಸಿಗೆ ಬಂದವರಿಗೆಲ್ಲಾ ಐಶ್ವರ್ಯ ರೈ ಬೇಕು ಅಂದ್ರೆ ಹೇಗೆ? ಅವಳೊಬ್ಬಳೆ ಇರುವುದು- ಸಚಿವ ಕೆ.ಎಸ್. ಈಶ್ವರಪ್ಪ

Nagaraja AB

ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಕುರಿತು ಮಾತನಾಡುವ ಭರದಲ್ಲಿ  ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಮತ್ತೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಮಾಡುವ ಸಾಧ್ಯತೆ ಇದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 
ಉಪ ಮುಖ್ಯಮಂತ್ರಿ ಆಗುವುದಕ್ಕೆ ರಾಜಕಾರಣದಲ್ಲಿ ಯಾರಿಗೆ ತಾನೆ ಇಷ್ಟ ಇರುವುದಿಲ್ಲ ಹೇಳಿ.ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ವಯಸ್ಸಿಗೆ ‌ಬಂದಂತವರೆಲ್ಲಾ ಐಶ್ವರ್ಯ ರೈ ಬೇಕು ಎಂದು ಕೇಳುತ್ತಾರೆ. ಆದರೆ ಅವಳು ಇರುವುದು ಒಬ್ಬಳೇ ತಾನೇ? ಅದು ಹಾಗಾಗಲ್ಲ ಎಂದು ಉದಾಹರಿಸುವ ಭರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಎಡವಟ್ಟು ಮಾಡಿಕೊಂಡಿದ್ದಾರೆ.

ಉಪ ಮುಖ್ಯಮಂತ್ರಿ ಆಗುವುದಕ್ಕೆ ಎಲ್ಲರಿಗರೂ ಇಷ್ಟ ಇರುತ್ತದೆ.ಅದೇನೋ ಹೇಳುತ್ತಾರಲ್ಲಾ ವಯಸ್ಸಿಗೆ ‌ಬಂದವರಿಗೆಲ್ಲಾ ಐಶ್ವರ್ಯ ರೈ ಬೇಕು ಎಂದು ಕೇಳುತ್ತಾರೆ.ಆದರೆ ಅವಳು ಇರುವುದು ಒಬ್ಬಳೇ ತಾನೇ? ಅದು ಹಾಗೆಲ್ಲಾ ಆಗಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡರು.

SCROLL FOR NEXT