ಮಗನಿಗೆ ಸಿಹಿ ತಿನ್ನಿಸುತ್ತಿರುವ ಮುಖ್ಯಮಂತ್ರಿಬಿಎಸ್ ವೈ 
ರಾಜಕೀಯ

ಮಂಡ್ಯ ಜಿಲ್ಲೆಯಲ್ಲಿ ಖಾತೆ ತೆರೆದ ಬಿಜೆಪಿ: ಮಗನಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ ಮುಖ್ಯಮಂತ್ರಿ ಬಿಎಸ್ ವೈ!

ಜೆಡಿಎಸ್ ಭದ್ರಕೋಟೆ ಎಂದೇ ಜನಜನಿತವಾಗಿದ್ದ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಬೆಂಗಳೂರು: ಜೆಡಿಎಸ್ ಭದ್ರಕೋಟೆ ಎಂದೇ ಜನಜನಿತವಾಗಿದ್ದ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಕೆ. ಆರ್. ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ , ಗೆಲುವಿನ ಸನ್ನಿಹಕ್ಕೆ ಬರುತ್ತಿದ್ದಂತೆಯೇ ಬೆಂಗಳೂರಿನ ನಿವಾಸದಲ್ಲಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರನಿಗೆ ಸಿಹಿ ತಿನ್ನಿಸಿ ಸಂಭ್ರಮ ಪಟ್ಟರು.

ಕೆ. ಆರ್. ಪೇಟೆ ಗೆಲುವಿನಲ್ಲಿ ವಿಜಯೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ.  ಈ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿಯನ್ನು ಅವರೇ ವಹಿಸಿಕೊಂಡಿದ್ದರು. ತಮ್ಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಬಾಯಿಸುವ ಮೂಲಕ ತಾವೊಬ್ಬ ಭವಿಷ್ಯದ ಅತ್ಯುತ್ತಮ ಸಂಘಟನಗಾರ ಎಂಬುದನ್ನು ವಿಜಯೇಂದ್ರ ನಿರೂಪಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ್ ಹಾಗೂ ವಿಜಯೇಂದ್ರ ಅವರ ನೇತೃತ್ವದಲ್ಲಿ ಕೆ. ಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮತ್ತೆ ಗೆಲುವು ಸಾಧಿಸುವಂತಾಗಿದ್ದು, ಬಿಜೆಪಿ ವಲಯದಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ