ರಾಜಕೀಯ

ಉಪ ಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ದೊರಕಲಿದೆಯೇ?

Nagaraja AB

ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳ  ಮತ ಎಣಿಕೆ ಪ್ರಗತಿಯಲಿದ್ದು ಬಿಜೆಪಿ 12 ಸ್ಥಾನ   ಪಡೆಯುವುದು ಬಹುತೇಕ ಖಾತ್ರಿಯಾದಂತಿದ್ದು, ಈ ಮೂಲಕ ಸರಕಾರ  ಮತ್ತು ನಾಯಕತ್ವ ವಹಿಸಿರುವ ಸಿಎಂ  ಯಡಿಯೂರಪ್ಪ  ರಾಜಕೀಯವಾಗಿ  ಮತ್ತಷ್ಟು ಶಕ್ತಿಶಾಲಿಯಾಗಲಿದ್ದಾರೆ. ಆದರೆ ಚುನಾವಣೆಯಲ್ಲಿ  ಸೋತವರಿಗೂ ಸಚಿವ ಸ್ಥಾನ ದೊರಕಲಿಯೇ ಎಂಬುದು ಬಿಜೆಪಿ ಪಾಲಿಗೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ. 

ಬಿಜೆಪಿ ಸರಕಾರ ಬರಲು ಕಾರಣಿಬೂತರಾದ ವಿಶ್ವನಾಥ್  ಮತ್ತು ಎಂಟಿಬಿ ನಾಗರಾಜ್  ಅವರಿಗೆ ಸಚಿವ ಸ್ಥಾನ  ದೊರಕಲಿಯೇ? ಎಂಬುದು ಬಿಸಿ ಬಿಸಿ ಚರ್ಚೆಗೆ ಗ್ರಾಸ ಒದಗಿಸಿದೆ. ಇದಕ್ಕೆ ತುಪ್ಪ  ಸುರಿದಂತೆ  ಸೋತವರಿಗೆ ಯಾವುದೇ   ಸಚಿವ ಸ್ಥಾನವಿಲ್ಲ ಎಂದು  ಸಚಿವ ಈಶ್ವರಪ್ಪ ಹೇಳಿದ್ದರು .

ಬಿಜೆಪಿ ಸರ್ಕಾರ ರಚನೆ ಹಿಂದೆ ಬಿಜೆಪಿ ಅಭ್ಯರ್ಥಿಗಳಾದ ಹೆಚ್. ವಿಶ್ವನಾಥ್ ಹಾಗೂ ಎಂಬಿಬಿ ನಾಗರಾಜ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ,  ಉಪ ಚುನಾವಣೆಯಲ್ಲಿ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಸೋಲುವ ಮೂಲಕ ಮುಖ ಭಂಗ ಅನುಭವಿಸಿದ್ದಾರೆ. ಇವರ ಭವಿಷ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ತಲೆನೋವಾಗುವ ಸಾಧ್ಯತೆ ಇದೆ.

ಚುನಾವಣೆ ಸೋತವರಿಗೂ ಕೂಡಾ ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಹಿಂದೆ ಹೇಳಿಕೆ ನೀಡಿದ್ದರು. ಈಗ ಸರ್ಕಾರ ಸೇಫ್ ಆಗಿರುವುದರಿಂದ ಸೋತ ಅಭ್ಯರ್ಥಿಗಳನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

SCROLL FOR NEXT