ರಾಜಕೀಯ

ಸಿದ್ದರಾಮಯ್ಯ ಜ್ಯೋತಿ ಶಾಲೆ ಬಂದ್, ರೇವಣ್ಣ ನಿಂಬೆಹಣ್ಣು ನಾಪತ್ತೆ: ಆರ್.ಅಶೋಕ್ ವ್ಯಂಗ್ಯ

Lingaraj Badiger

ಬೆಂಗಳೂರು: ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಸಿದ್ದರಾಮಯ್ಯ ಜ್ಯೋತಿ ಶಾಲೆ ಬಂದ್ ಆಗಿದೆ. ದಿನೇಶ್ ಗುಂಡೂರಾವ್ ಅವರದು ಕೂಡ ಅದೇ ಹಾದಿ. ಮಾಜಿ ಸಚಿವ ರೇವಣ್ಣ‌ರ ನಿಂಬೆ ಹಣ್ಣು ಕೂಡ ಪತ್ತೆ ಇಲ್ಲ ಎಂದು ಬಿಜೆಪಿ ನಾಯಕ ಸಚಿವ ಆರ್.ಅಶೋಕ್  ಲೇವಡಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿತಾಂಶ ಕಂಡು ಜೆಡಿಎಸ್ ನಾಯಕರು ನಾಪತ್ತೆ ಆಗಿದ್ದಾರೆ. ಕಾಂಗ್ರೆಸ್ ಗೆ ದಾರಿ ಕಾಣದಾಗಿದೆ. ಸಿದ್ದರಾಮಯ್ಯ ಒಬ್ಬಂಟಿ ಆಗಿದ್ದಾರೆ. ಅನರ್ಹರು ಎಂಬ ಹಣೆಪಟ್ಟ ಕಟ್ಟಿದವರು ಸೋಲನ್ನು ಅನುಭವಿಸಿದ್ದು, ಅದಕ್ಕೆಲ್ಲ ಈಗ ಮುಕ್ತಿ ಸಿಕ್ಕಿದೆ. ನ್ಯಾಯಾಲಯದ  ಬೆಳವಣಿಗೆಯಿಂದ  ಅನರ್ಹರು ಎಂದು ಪಟ್ಟು ಕಟ್ಟಿದ್ದರು. ಈಗ ಅವೆಲ್ಲದಕ್ಕೂ ಮುಕ್ತಿ  ಸಿಕ್ಕಿದೆ. ಬಿಜೆಪಿ ಸರ್ಕಾರ ಸುರಕ್ಷಿತವಾಗುವುದಕ್ಕೆ ರಾಜ್ಯದ ಜನತೆ ಸೇತುವೆ  ಕಟ್ಟಿದ್ದಾರೆ ಎಂದರು‌.

ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಅವರ ಕಾರ್ಯಕರ್ತರಲ್ಲಿಯೂ ಕೂಡ ಉತ್ಸಾಹ ಇರಲಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರಿಗೆ ಜಾಸ್ತಿ ಉತ್ಸಾಹ ಇತ್ತು. ಯಡಿಯೂರಪ್ಪ ಎಲ್ಲಿಯೇ ಹೋದರೂ ಅವರಿಗೆ ಪಕ್ಷದ ಬೆಂಬಲ ಇತ್ತು.
ಆದರೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಅವರ ಜೊತೆ ಯಾರೂ ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಇದು ಬೊಂಬಾಟ್ ಫಲಿತಾಂಶ ನೀಡಿದೆ ಎಂದು ಕುಟುಕಿದರು.

ಹೊಸಕೋಟೆ ಗೆಲ್ಲಬೇಕಿತ್ತು. ಆದರೆ ನಮ್ಮ ಪಕ್ಷದವರೇ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರಿಂದ ಅಲ್ಲಿ ಸೋಲಾಗಿದೆ. ಶರತ್ ಬಚ್ಚೇಗೌಡ ಅವರ ವಿರುದ್ಧ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

SCROLL FOR NEXT