ಪರಮೇಶ್ವರ್ 
ರಾಜಕೀಯ

'ಝೀರೋ ಟ್ರಾಫಿಕಲ್ಲಿ ಓಡಾಡಿದ್ದ ಪರಂ ಸ್ಥಿತಿ ಏನಾಯ್ತು? ಪೊಲೀಸರು ಇಲ್ಲ, ನೊಣ ಹೊಡೆಯೋರು ಇಲ್ಲ'

 ಹಿಂದೆ ಮುಂದೆ ಪೊಲೀಸರನ್ನು ಇಟ್ಟುಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ್ದ ಮಾಜಿ ಡಿಸಿಎಂ ಜಿ, ಪರಮೇಶ್ವರ್ ಪರಿಸ್ಥಿತಿ ಏನಾಯ್ತು ನೋಡಿ ಕಾಂಗ್ರೆಸ್ ಮುಖಂಡ  ಕೆ.ಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ.

ತುಮಕೂರು:  ಹಿಂದೆ ಮುಂದೆ ಪೊಲೀಸರನ್ನು ಇಟ್ಟುಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ್ದ ಮಾಜಿ ಡಿಸಿಎಂ ಜಿ, ಪರಮೇಶ್ವರ್ ಪರಿಸ್ಥಿತಿ ಏನಾಯ್ತು ನೋಡಿ ಕಾಂಗ್ರೆಸ್ ಮುಖಂಡ  ಕೆ.ಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ.

ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ನೀಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಣ್ಣ, ಆ ಪುಣ್ಯಾತ್ಮನಿಗೆ ಕಷ್ಟದಲ್ಲಿದ್ದಾಗ ಸಹಾಯ ಮಾಡಿ ಶಾಸಕನಾಗಿ ಮಾಡಿದೆ. ಆತ ಗೆದ್ದು ಶಾಸಕನಾಗಿ ಡಿಸಿಎಂ ಆದ.

ಹಿಂದೂ ಮುಂದೂ ಪೊಲೀಸರನ್ನು ಇಟ್ಟಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ. ಈಗ ಅಧಿಕಾರ ಇಲ್ಲ ಪರಿಸ್ಥಿತಿ ಹೇಗಾಗಿದೆ ನೋಡಿ. ಪೊಲೀಸರು ಹಿಂದೂ ಇಲ್ಲ ಮುಂದೂ ಇಲ್ಲ. ನೊಣ ಹೊಡಿಯೋರೂ ಇಲ್ಲ ಎಂದು ವ್ಯಂಗ್ಯವಾಡಿದರು.

ಒಂದೇ ಬೇಂಚಲ್ಲಿ ಕುಳಿತು ಕಲಿತವರು. ಹಾಗಾಗಿ ಅವನನ್ನು ಕೊರಟಗೆರೆಯಿಂದ ಗೆಲ್ಲಿಸಿಕೊಂಡು ಬಂದೇ. ಆತನಿಗೆ ಉಪಕಾರ ಸ್ಮರಣೆ ಇಲ್ಲ. ನಾನು ಅಧ್ಯಕ್ಷನಾಗಿದ್ದ ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡುವ ಮೂಲಕ ನನ್ನ ಅಧಿಕಾರ ಕಿತ್ತುಕೊಳ್ಳುವ ಪಿತೂರಿ ಮಾಡಿದ್ದ ಎಂದು ಪರಮೇಶ್ವರ್ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!