ರಾಜಕೀಯ

ಸಾಹುಕಾರ್- ಬೊಮ್ಮಾಯಿ ಜಟಾಪಟಿ, ಒಂದೇ ಖಾತೆಗೆ ಇಬ್ಬರ ಪಟ್ಟು: ಬಿಎಸ್ ವೈ ಸುಸ್ತು!

Shilpa D

ಬೆಂಗಳೂರು:  ರಾಜ್ಯ ವಿಧಾನಸಭಾ ಉಪ ಚುನಾವಣೆಯಲ್ಲಿ ಬೆಳಗಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಜಯ ಗಳಿಸಿರುವ ರಮೇಶ್ ಜಾರಕಿಹೊಳಿಗೆ ರಾಜ್ಯ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಇದಕ್ಕೆ ಬಿಜೆಪಿ ನಾಯಕರೇ ಅಡ್ಡಗಾಲು ಹಾಕುತ್ತಿದ್ದು, ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿಗೆ ನೀರಾವರಿ ಖಾತೆ ನೀಡಬಾರದು ಎಂದು ಸಿಎಂ ಎದುರು ಪಟ್ಟು ಹಿಡಿದಿದ್ದಾರೆ.

ಜಲಸಂಪನ್ಮೂಲ ಖಾತೆಗಾಗಿ ಬಸವರಾಜ್ ಬೊಮ್ಮಾಯಿ, ಸಾಹುಕಾರ್ ರಮೇಶ್ ಜಾರಕಿಹೋಳಿ ಪಟ್ಟು ಹಿಡಿದಿದ್ದಾರಂತೆ. ನಮಗೆ ಆ ಖಾತೆ ನೀಡಬೇಕು ಅಂತ ಸಿಎಂಗೆ ದುಂಬಾಲು ಬಿದ್ದಿದ್ದಾರೆ. 

ಇಬ್ಬರನ್ನೂ ಬಿಡೋ ಮನಸ್ಸು ಯಡಿಯೂರಪ್ಪಗೆ ಇಲ್ಲ. ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರು ಬಂಡಾಯ ಸಾರೋದು ಗ್ಯಾರಂಟಿ. ಹೀಗಾಗಿ ಅಡಕತ್ತರಿಯಲ್ಲಿ ಸಿಎಂ ಯಡಿಯೂರಪ್ಪ ಸಿಲುಕಿದ್ದಾರೆ.

ಈಗಾಗಲೇ ಗೃಹ ಇಲಾಖೆ ಹೊಂದಿರೋ ಬೊಮ್ಮಾಯಿ ನನಗೆ ಗೃಹ ಖಾತೆ ಬೇಡ. ಹಿಂದೆಯೂ ನಾನು ಜಲಸಂಪನ್ಮೂಲ ಮಂತ್ರಿ ಆಗಿದ್ದೆ. ಈಗ ಅದನ್ನೇ ಕೊಡಿ. ಉತ್ತಮವಾಗಿ ಕೆಲಸ ಮಾಡ್ತೀನಿ ಅಂತ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನೀರಾವರಿ ಇಲಾಖೆಯನ್ನು ರಮೇಶ್ ಸರಿಯಾಗಿ ನಿಭಾಯಿಸುವುದಿಲ್ಲ. ಈಗಾಗಲೇ ಹಲವು ಜಲ ವಿವಾದಗಳು ಬಗೆಹರಿದಿಲ್ಲ. ಆ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಉತ್ತಮವರಿಗೆ ಖಾತೆ ವಹಿಸಿ. ಆದರೆ ರಮೇಶ್ ಜಾರಕಿಹೊಳಿಗೆ ಮಾತ್ರ ಆ ಖಾತೆ ಕೊಡಬೇಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ಸಲಹೆ ನೀಡಿರುವ ಬಿಜೆಪಿ ಶಾಸಕರು ಜಾರಕಿಹೊಳಿಗೆ ನೀರಾವರಿ ಖಾತೆ ನೀಡದಂತೆ ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

SCROLL FOR NEXT