ರಾಜಕೀಯ

ಚುನಾವಣೆ ಬಳಿಕವೂ ನಿಗೂಢವಾಗಿಯೇ ಇದೆ ಶರತ್ ಬಚ್ಚೇಗೌಡ ನಡೆ

Manjula VN

ಬೆಂಗಳೂರು: ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸ್ವಾಭಿಮಾನದ ಗೆಲುವು ಸಾಧಿಸಿರುವ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರ ನಡೆ ಇನ್ನೂ ನಿಗೂಢವಾಗಿಯೇ ಉಳಿದಿದೆ. 

ಉಪಚುನಾವಣೆ ಗೆಲುವುವಿನ ಬಳಿಕವೂ ಶರತ್ ಅವರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರರಾಗಿರುವ ಶರತ್ ಬಚ್ಚೇಗೌಡ ಅವರು, ಉಪಚುನಾವಣೆಗೂ ಮುನ್ನ ಬಿಜೆಪಿ ಅಭ್ಯರ್ಥಿಯಾಗಿದ್ದರು. ಚುನಾವಣೆ ವೇಳೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಗ್ಗೆ ಮಾಹಿತಿ ತಿಳಿದ ಬಿಜೆಪಿ ಶರತ್ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿತ್ತು. 

ಶರತ್ ಅವರ ನಿಲುವು ಈಗಲೂ ನಿಗೂಢವಾಗಿದ್ದು, ರಾಷ್ಟ್ರೀಯ ಪಕ್ಷವೊಂದಕ್ಕೆ ಶರತ್ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಲಾಗುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಯಾವುದೇ ಸ್ಪಷ್ಟ ಮಾಹಿತಿಗಳನ್ನು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. 

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಆಫರ್ ಗಳು ಬರುತ್ತಿವೆ. ಈ ಬಗ್ಗೆ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿ ಹಾಗೂ ಮತಗಳ ಮಾದರಿಯನ್ನು ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳುತ್ತೇನೆಂದು ಶರತ್ ಅವರು ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷ ಶರತ್ ಅವರ ಮೊದಲನೇ ಆಯ್ಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೊಡೆತ ನೀಡುವುದಿಲ್ಲವನೇ ಎಂಬ ಪ್ರಶ್ನೆಗೆ ಶರತ್ ಅವರು ಉತ್ತರಿಸಿದ್ದು, ಈ ಬಗ್ಗೆ ನನಗೂ ಅರಿವಿದೆ ಎಂದಿದ್ದಾರೆ. 

ಬಿಜೆಪಿಗೆ ಈಗಾಗಲೇ ಬಹುಮತವನ್ನು ಪಡೆದುಕೊಂಡಿದ್ದು, ಸ್ಥಿರ ಸರ್ಕಾರ ರಚನೆ ಮಾಡಿದೆ. ಹೀಗಾಗಿ ಶರತ್ ಅವರ ಅಗತ್ಯತೆ ಬಿಜೆಪಿಗಿಲ್ಲ ಎಂದು ಹೇಳಲಾಗುತ್ತಿದೆ. 

SCROLL FOR NEXT