'ಜಿ.ಟಿ.ಡಿಗೆ ಪಕ್ಷದಿಂದ ಯಾವ ಅನುಕೂಲವೂ ಆಗಿಲ್ಲವಾ? ನನ್ನಿಂದ ಸ್ವಲ್ಪವೂ ಸಹಾಯವಾಗಿಲ್ಲವಾ?'
ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡರು ಪಕ್ಷದಿಂದ ಏನೂ ಮಾಡಿಕೊಂಡಿಲ್ಲವಾ? ನನ್ನಿಂದ ಸ್ವಲ್ಪವೂ ಅವರಿಗೆ ಅನುಕೂಲ ಆಗಿಲ್ಲವಾ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರು: ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡರು ಪಕ್ಷದಿಂದ ಏನೂ ಮಾಡಿಕೊಂಡಿಲ್ಲವಾ? ನನ್ನಿಂದ ಸ್ವಲ್ಪವೂ ಅವರಿಗೆ ಅನುಕೂಲ ಆಗಿಲ್ಲವಾ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಅವರಿಗಾಗಿ ಕೆಲಸ ಮಾಡುತ್ತೇನೆ, ಎಲ್ಲ ಅಧಿಕಾರವವನ್ನು ಅವರೇ ಪಡೆದುಕೊಳ್ಳಲಿ, ಆದರೆ ಯಾರು ಯಾವಾಗ ಪಕ್ಷ ಬಿಟ್ಟು ಹೋಗುತ್ತಾರೆ ಎಂಬುದನ್ನು ಹೇಳುವುದಕ್ಕೆ ಆಗುತ್ತದೆಯೇ’ ಎಂದು ವಿವರಿಸಿದ್ದಾರೆ.
ನೂತನ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿ, ‘ನೀವೇ ನಮ್ಮ ಗುರುಗಳು ಅಂತ ಹೇಳುತ್ತಾರೆ, ಅವರೇ ಇವರಿಗೆ ಟೋಪಿ ಹಾಕಿ ಹೋಗಿದ್ದು ಗೊತ್ತಿಲ್ಲವೇ?’ ಎಂದು ಚುಚ್ಚಿದರು. ನನ್ನ ಷಷ್ಠ್ಯಬ್ದಪೂರ್ತಿ ಸಮಾರಂಭಕ್ಕೆ ಜಿ.ಟಿ. ದೇವೇಗೌಡರನ್ನು ಬಿಟ್ಟು ಎಲ್ಲರೂ ಬಂದು ಊಟ ಮಾಡಿ ಹೋಗಿದ್ದಾರೆ ಯಾರೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.