ರಾಜಕೀಯ

ಗೃಹ ಸಚಿವ ಸ್ಥಾನ ನೀಡಿದರೆ ಒಳಿತು- ಶಾಸಕ ಬಿ. ಸಿ. ಪಾಟೀಲ್ 

Nagaraja AB

ಬೆಂಗಳೂರು: ಉಪಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರು ಭಾನುವಾರ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. 

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಪ‌ ಚುನಾವಣೆ ಯಲ್ಲಿ ಗೆದ್ದ 15 ಅಭ್ಯರ್ಥಿಗಳ ಶಾಸಕರಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಶಾಸಕ ರಮೇಶ್ ಜಾರಕಿಹೊಳಿ, ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ  ಸಂತಸ ವ್ಯಕ್ತಪಡಿಸಿದರು.ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ  ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.

 ಇದೇ ವೇಳೆ ಮಾತನಾಡಿದ ಹಿರೇಕೆರೂರು ಕ್ಷೇತ್ರದ ಶಾಸಕ ಬಿ. ಸಿ. ಪಾಟೀಲ್, ನಾನು ಈ ಹಿಂದೆ ಕೆಲಸ ಮಾಡಿದ ಇಲಾಖೆ. ಹೀಗಾಗಿ ಸಹಜವಾಗಿ ನನಗೆ ಅದರ ಮೇಲೆ ಆಸೆ ಇದೆ ಎಂದು ಹೇಳುವ ಮೂಲಕ ಗೃಹ ಸಚಿವರ ಖಾತೆ ನೀಡಿದರೆ ಒಳ್ಳೆಯದು ಎಂದು ಪರೋಕ್ಷವಾಗಿ ಗೃಹ ಖಾತೆ ನೀಡುವಂತೆ ಒತ್ತಾಯಿಸಿದರು. 

ಅಥಣಿ ಶಾಸಕ ಕುಮಟಳ್ಳಿ ಮಾತನಾಡಿ, ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ ,ಆದ್ರೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವು ದಕ್ಕೆ ರೆಡಿಯಿದ್ದೇನೆ ಎಂದು ಮುಖ್ಯಮಂತ್ರಿಗೆ ಮೆಸೇಜ್ ರವಾನಿಸಿದರು.

SCROLL FOR NEXT