ದೇವೇಗೌಡ 
ರಾಜಕೀಯ

ಸಂಸತ್ತಿನಲ್ಲಿ ದೇವೇಗೌಡರನ್ನು ಕೆಣಕಿದ್ದ ಮೋದಿಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟ ಎಚ್​ಡಿಡಿ

ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಪಕ್ಕ ಕುಳಿತಿದ್ದ ದೇವೇಗೌಡರನ್ನು ಕರ್ನಾಟಕ ರೈತರ ಸಾಲಮನ್ನಾ ವಿಚಾರ ಎತ್ತಿ ಪ್ರಧಾನಿ ನರೇಂದ್ರ ಮೋದಿ ಕೆಣಕಿದ್ದು ಇದಕ್ಕೆ ಮಾಜಿ ಪ್ರಧಾನಿ ....

ಬೆಂಗಳೂರು: ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಪಕ್ಕ ಕುಳಿತಿದ್ದ ದೇವೇಗೌಡರನ್ನು ಕರ್ನಾಟಕ ರೈತರ ಸಾಲಮನ್ನಾ ವಿಚಾರ ಎತ್ತಿ ಪ್ರಧಾನಿ ನರೇಂದ್ರ ಮೋದಿ ಕೆಣಕಿದ್ದು ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
48 ಸಾವಿರ ಕೋಟಿ ರು. ಸಾಲಮನ್ನಾ ಆಗಲಿದೆ ಎಂದು ಹೇಳಿ ರಾಜ್ಯದಲ್ಲಿ ಇದುವರೆಗೆ ಏಳು ಸಾವಿರ ರೈತರ ಸಾಲವಷ್ಟೇ ಮನ್ನಾ ಆಗಿದೆ ಎಂದು ನರೇಂದ್ರ ಮೋದಿ ದೇವೇಗೌಡರನ್ನು ಸಂಸತ್ತಿನಲ್ಲಿ ಕೆಣಕಿದ್ದರು. ಆದರೆ ಆ ವೇಳೆ ಗಂಭೀರವಾಗಿಯೇ ಕುಳಿತಿದ್ದ ದೇವೇಗೌಡ ಇದೀಗ ಟ್ವೀಟ್ ಮೂಲಕ ಮೋದಿಗೆ ಟಾಂಗ್ ನೀಡಿದ್ದಾರೆ.
ಕರ್ನಾಟಕದಲ್ಲಿ ರೈತರ ಸಾಲಮನ್ನಾ ಯೋಜನೆ ಜಾರಿಯಲ್ಲಿದೆ. ಆದರೆ ಮೋದಿ ನೀಡಿರುವ ಭರವಸೆ ರಾಮ ಮಂದಿರ, ಗಂಗಾ ನದಿ ಶುದ್ದೀಕರಣ,ನದಿ ಜೋಡಣೆ, 15 ಲಕ್ಷ ರೂ. ಗಳನ್ನು ಜನರ ಖಾತೆಗೆ ಹಾಕುವೆ ಎಂದದ್ದು ಸೇರಿ ಹಲವು ಭರವಸೆಗಳ ಸ್ಥಿತಿ "ಏನೂ ಇಲ್ಲ" ಎಂಬಂತಾಗಿದೆ ಎಂದು ಟೀಕಿಸಿದ್ದಾರೆ.
ಅಲ್ಲದೆ "ಏನೂ ಇಲ್ಲ" ಎಂಬ ಸ್ಥಿತಿಗಿಂತ "ಜಾರಿಯಲ್ಲಿದೆ" ಎಂಬ ಸ್ಥಿತಿ ಉತ್ತಮವಾದದ್ದು ಎಂದೂ ಅವರು ಹೇಳಿದ್ದಾರೆ.
ಇನ್ನು ಬಿಜೆಪಿ ಪಾಲಿಗೆ ಸಧ್ಯ ಜಾರಿಯಲ್ಲಿರುವ ಸ್ಥಿತಿ ಎಂದರೆ ಅದು ಕರ್ನಾಟಕದಲ್ಲಿನ ಆಪರೇಷನ್ ಕಮಲ ಮಾತ್ರ ಎಂದೂ ಅವರು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಮೋದಿ ಹಾಗೂ ರಾಜ್ಯ ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT