ರಾಜಕೀಯ

ಹಳ್ಳಹಿಡಿಯಲಿದೆಯೇ ಆಡಿಯೊ ಟೇಪ್ ವಿಚಾರಣೆ; ಕೋರ್ಟ್ ಗೆ ಹೋಗಲು ಬಿಜೆಪಿ ನಿರ್ಧಾರ

Sumana Upadhyaya

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಅಕ್ರಮವಾಗಿ ಆಪರೇಷನ್ ಕಮಲದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿರುವ ಆಡಿಯೊ ಟೇಪ್ ನ ಆರೋಪ, ಗದ್ದಲದಲ್ಲಿಯೇ ಏಳು ದಿನಗಳ ಬಜೆಟ್ ಅಧಿವೇಶನ ಕಳೆದುಹೋಯಿತು.

ಇದರ ತನಿಖೆಯನ್ನು ಮೈತ್ರಿ ಸರ್ಕಾರ ಎಸ್ಐಟಿ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿದ್ದು,ಸರ್ಕಾರದ ಮುಂದಿನ ನಡೆ ವಿಶೇಷ ತನಿಖಾ ತಂಡ ನೇಮಿಸುವುದು. ಆದರೆ ಬಿಜೆಪಿ ಇದಕ್ಕೆ ಅಸಹಕಾರ ತೋರಿಸಲು ನಿರ್ಧರಿಸಿದೆ. ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಅವರಿಗೆ ನೊಟೀಸ್ ನೀಡಿದರೂ ಸಹ ತನಿಖೆಗೆ ಹಾಜರಾಗದಿರಲು ಚಿಂತಿಸಿದ್ದಾರೆ. ಸರ್ಕಾರ ಎಸ್ಐಟಿಯನ್ನು ನೇಮಕ ಮಾಡಿದ ಕೂಡಲೇ ಅದಕ್ಕೆ ತಡೆ ತರಲು ಬಿಜೆಪಿ ಕೋರ್ಟ್ ಗೆ ಹೋಗಲು ತಯಾರಿ ನಡೆಸಿದೆ.

ಜೆಡಿಎಸ್ ಶಾಸಕನ ಪುತ್ರ ಶರಣಗೌಡ ಕಂಡಕೂರು ದಾಖಲಿಸಿದ್ದ ಕೇಸಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ನಿನ್ನೆ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಆಡಿಯೊ ಟೇಪು ಬಿಡುಗಡೆಯ ಹಿಂದಿನ ಉದ್ದೇಶ ಯಡಿಯೂರಪ್ಪನವರಿಗೆ ಮುಜುಗರ ಉಂಟುಮಾಡಲು ಆಗಿದೆ.

ಆದರೆ ರಾಜ್ಯದ ಜನತೆಗೆ ಈ ಆಡಿಯೊ ಟೇಪ್ ಮೇಲೆ ಯಾವುದೇ ಆಸಕ್ತಿಯಿಲ್ಲ, ಇದರಿಂದ ಚುನಾವಣೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ, ನಾವು ವಿಚಾರಣೆಗೆ ಸಹಕರಿಸುವುದಿಲ್ಲ. ಅವರು ನೊಟೀಸ್ ಮೇಲೆ ನೊಟೀಸ್ ಕಳುಹಿಸುತ್ತಾರೆ, ಆದರೆ ನಾವು ವಿಚಾರಣೆಗೆ ಹಾಜರಾಗುವುದಿಲ್ಲ. ನಾವು ನ್ಯಾಯಾಲಯದಿಂದ ತಡೆ ತರುತ್ತೇವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಸದನದಲ್ಲಿ ಪಟ್ಟು ಹಿಡಿದಿದ್ದ ಸರ್ಕಾರ ಇದುವರೆಗೆ ಎಸ್ ಐಟಿ ತನಿಖೆಗೆ ಯಾರನ್ನೂ ನೇಮಿಸಿಲ್ಲ. ಸರ್ಕಾರ ಈ ವಿಷಯದಲ್ಲಿ ಮುಂದುವರಿಯಲಿಕ್ಕಿಲ್ಲ ಎಂಬ ಬಿಜೆಪಿಯ ವಿಶ್ವಾಸಕ್ಕೆ ಇದು ಇನ್ನಷ್ಟು ಬಲ ತಂದಿದೆ.

SCROLL FOR NEXT