ರಾಜಕೀಯ

ಮಿಮಿಕ್ರಿ ಮಾಡುವುದು ಸುಲಭವಲ್ಲ: ನಕಲಿ ಆಡಿಯೋ ಟೇಪ್ ಆರೋಪಕ್ಕೆ ಸಿಎಂ ಸ್ಪಷ್ಟನೆ

Shilpa D
ಬೆಂಗಳೂರು: ರಾಜ್ಯ ರಾಜಕಾರಣಜಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಯಡಿಯೂರಪ್ಪ ಆಡಿಯೋ ಟೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಿಮಿಕ್ರಿ ಮಾಡುವುದು ಸುಲಭವಲ್ಲ, ಅಡಿಯೋ ಟೇಪ್ ನಕಲಿಯಲ್ಲ, ಅದು ಒರಿಜಿನಲ್ ಎಂದು ಸ್ಪಷ್ಟ ಪಡಿಸಿದ್ದಾರೆ.
ಖಾಸಗಿ ಆಂಗ್ಲ ಚಾನೆಲ್ ನೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಶಾಸಕರೊಬ್ಬರ ಪುತ್ರನಿಗೆ ಮಾಜಿ ಸಿಎಂ  ಯಡಿಯೂರಪ್ಪ  ಆಮೀಷವೊಡ್ಡಿದ್ದಾರೆ ಎಂಬ ಆಡಿಯೋ ನಕಲಿ ಎಂದು ಯಡಿಯೂರಪ್ಪ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಯಾರೋಬ್ಬರ ಧ್ವನಿ ಮಿಮಿಕ್ರಿಯನ್ನು ಮಾಡುವುದು ಸುಲಭವಲ್ಲ, ಅದು ಒರಿಜಿನಲ್ ಎಂದು ತಿಳಿಸಿದ್ದಾರೆ, ಆಡಿಯೋವನ್ನು ಅಸಲಿಯಲ್ಲ, ಯಡಿಯೂರಪ್ಪ ಅವರ ಧ್ವನಿಯನ್ನು ಮಿಮಿಕ್ರಿ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.  ಆಡಿಯೋ ಟೇಪ್ ಪ್ರಕರಣವನ್ನು  ಸಮ್ಮಿಶ್ರ ಸರ್ಕಾರ ಎಸ್ ಐಟಿ ತನಿಖೆಗೆ ವಹಿಸಿದೆ.
SCROLL FOR NEXT