ಲೋಕಸಮರಕ್ಕೆ ಮುನ್ನ ವಿಜಯಪುರ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ಸಂಧಾನಕ್ಕಾಗಿ ಯಡಿಯೂರಪ್ಪಗೆ ಮೊರೆ
ವಿಜಯಪುರ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ವಿಜಯಪುರ ಭಾಗದಲ್ಲಿ ಬಿಜೆಪಿ ನಾಯಕರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಅದರಲ್ಲಿಯೂ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಿಗಜಿಣಗಿ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ರಾಜ್ಯ ಬಿಜೆಪಿ ನಾಯಕರಿಗೆ ಹರಸಾಹಸವೇ ಆಗಿದೆ ಎನ್ನಲಾಗಿದೆ.ಈ ಹಿಂದೆ ಜಿಗಜಿಣಗಿ ವಿರುದ್ಧ ಪರೋಕ್ಷ ಹೇಳಿಕ್ಜೆ ನೀಡುತ್ತಿದ್ದ ಯತ್ನಾಳ್ ಈಗ ತಮ್ಮ ಪಕ್ಷದ ನಾಯಕನ ವಿರುದ್ಧ ಸಮರಕ್ಕೆ ಸಾಮಾಜಿಕ ಮಾದ್ಯಮವನ್ನೇ ಬಳಸಿಕೊಳ್ಳುತ್ತಿದ್ದಾರೆ.ಅವರು ಇತ್ತೀಚಿನ ದಿನದಲ್ಲಿ ಹಾಕಿದ ಪೋಸ್ಟ್ ವಿಜಯಪುರ ಅಭಿವೃದ್ದಿಗಾಗಿ ಸಂಸದ ಜಿಗಜಿಣಗಿ ಅವರ ಬದ್ದತೆಯನ್ನೇ ಪ್ರಶ್ನಿಸಿದ್ದಾರೆ.
ಹಾಗೆಯೇ ಜಿಗಜಿಣಗಿ "ಆದರ್ಶ ಗ್ರಾಮ ಯೋಜನೆ" ಅಡಿಯಲ್ಲಿ ದತ್ತು ಪಡೆದ ಮಕನಪುರ ಗ್ರಾಮದ ಅಭಿವೃದ್ದಿ ಎಷ್ಟರ ಮಟ್ಟಿಗೆ ಆಗಿದೆ ಎಂದು ಯ್ತ್ನಾಳ್ ಪ್ರಶ್ನಿಸಿದ್ದಾರೆ.ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡ ಏಕಕಿಕ ಸಂಸದ ತಾನು ಎಂದು ಜಿಗಜಿಣಗಿ ಹೇಳಿಕೆ ನೀಡಿದ ಬೆನ್ನಲ್ಲಿ ಯತ್ನಾಳ್ ಈ ಪ್ರತಿಕ್ರಿಯೆ ನೀಡಿದ್ದಾರೆ.ಅಲ್ಲದೆ ಜಿಗಜಿಣಗಿ ಅವರು ತಾವು ನಡೆಸಲುದ್ದೇಶಿಸ್ದ್ದ ಅಭಿವೃದ್ದಿ ಕಾರ್ಯಗಳಿಗೆ ಸರ್ಕಾರ ಸಹಕಾರ ನೀಡುತಿಲ್ಲ ಎಂದೂ ದೂರಿದ್ದರು.
ಅವರ ಹೇಳಿಕೆಗಳಿಗೆ ಉತ್ತರಿಸಿದ ಯತ್ನಾಳ್ "ಕಳೆದ 10 ವರ್ಷಗಳಲ್ಲಿ, ಜಿಲ್ಲೆಯ ಅಭಿವೃದ್ದಿ ಕಳಪೆಯಾಗಿದೆ.ಅಲ್ಲದೆ ಪ್ರಸ್ತುತ ಸಂಸದರ ಆಡಳಿತಾವಧಿಯಲ್ಲಿ ಯಾವುದೇ ನಿಧಿ ಬಿಡುಗಡೆಯಾಗಿ ಬಳಕೆಯಾಗಿಲ್ಲ" ಎಂದಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ ಯತ್ನಾಳ್ ತಮ್ಮ ಬೆಂಬಲಿಗರಿಗೆ ಲೋಕಸಭೆ ಟಿಕೆಟ್ ಸಿಗುವಂತೆ ಮಾಡಲು ಪಾರ್ಟಿಯ ಮುಖ್ಯಸ್ಥರ ಮೇಲೆ ಈ ರೀತಿ ಪ್ರಭಾವ ಹೇರುತ್ತಿದ್ದಾರೆ. ಅಲ್ಲದೆ ಇನ್ನೊಂದು ಮೂಲದ ಪ್ರಕಾರ ಅವರೇ ಸ್ವತಃ ಲೋಕಸಭೆ ಕಣಕ್ಕಿಳಿಯಲು ಟಿಕೆಟ್ ಆಕಾಂಕ್ಷಿಯಾಗಿದ್ದಾರೀನ್ನಲಾಗಿದೆ. ಯತ್ನಾಳ್ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಿದ ದಿನದಿಂದ ಜಿಲ್ಲಾ ಬಿಜೆಪಿಯಲ್ಲಿ ಈ ಒಳಜಗಳ ಪ್ರಾರಂಭವಾಗಿದೆ. ಇದೀಗ ಜಿಲ್ಲೆಯಲ್ಲಿ ಯತ್ನಾಳ್ ಹಾಗೂ ಜಿಗಜಿಣಗಿ ಬೆಂಬಲಿಗರು ಎರಡು ಪಕ್ಷವಾಗಿ ಹೋಳಾಗಿದ್ದಾರೆ.ಈ ಕಾರಣದಿಂದಾಗಿ ಜಿಲ್ಲಾ ಪಂಚಾಯತ್ ಹಾಗೂ ಸಿಟಿ ಕಾರ್ಪೋರೇಷನ್ ಗಳಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿ ತಾನು ಲಾಭ ಗಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಕಮಲ ಪಾಳಯದ ಈ ಒಳಜಗಳದ ಲಾಭವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದೆ. ಇದೀಗ ಜಿಲ್ಲಾ ನಾಯಕರು ಈ ಭಿನ್ನಾಭಿಪ್ರಾಯ್ತಗಳನ್ನು ಕೊನೆಗ್ಗೊಳಿಸುವಂತೆ ಪಕ್ಷದ ಹಿರಿಯ ಮುಖಂಡರಿಗೆ ಮನವಿ ಸಲ್ಲಿಸಿದ್ದಾರೆ.
ಶನಿವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಜಯಪುರಕ್ಕೆ ತೆರಳಲಿದ್ದು ಅವರು ಈ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸ ಪಕ್ಷದಲ್ಲಿದೆ. ಪತ್ರಿಕೆಯೊಡನೆ ಮ್,ಆತನಾಡಿದ ವಿಜಯಪುರ ಕ್ಷೇತ್ರದ ಉಸ್ತುವಾರಿ ಎಮ್ಎಲ್ಸಿ ಅರುಣ್ ಶಹಾಪುರ್ "ಪಕ್ಷದ ಹೈಕಮಾಂಡ್ ಲೋಕಸಭೆಗೆ ಯಾರು ನಿಲ್ಲಬೇಕು ಎನ್ನುವುದನ್ನು ನಿರ್ಧರಿಸಲಿದೆ. ಒಂದು ವೇಳೆ ಜಿಗಜಿಣಗಿ ಪಕ್ಷದ ಅಭ್ಯರ್ಥಿಯಾಗಿ ಘೋಷಿತವಾದರೆ ಯತ್ನಾಳ್ ಸೇರಿ ಎಲ್ಲಾ ಜಿಲ್ಲಾ ನಾಯಕರು ಪಕ್ಷದ ಪರ ಪ್ರಚಾರ ಕೈಗೊಳ್ಳಬೇಕು.ಅಲ್ಲದೆ ಯತ್ನಾಳ್ ಅವರ ಸಾಮಾಜಿಕ ತಾಣಗಳ ಬರಹಗಳಿಗೆ ಯಾವ ದೃಢೀಕರಣ ನೀಡಲು ಬರುವುದಿಲ್ಲ.ನಾವೆಲ್ಲಾ ಒಗ್ಗಟ್ತಾಗಿದ್ದೇವೆ, ನಮ್ಮಲ್ಲಿನ ಸಾಮರಸ್ಯವನ್ನು ಕದಡಲು ಸಾಧ್ಯವಿಲ್ಲ" ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos