ರಾಜಕೀಯ

ನನಗೆ 3 ಬಾರಿ ಸಿಎಂ ಆಗೋ ಅವಕಾಶ ಕೈತಪ್ಪಿದೆ, ಬೇಡ ಅಂದ್ರೂ ಡಿಸಿಎಂ ಮಾಡಿದ್ದಾರೆ: ಪರಮೇಶ್ವರ ಅಸಮಾಧಾನ

Raghavendra Adiga
ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಮತ್ತೆ "ದಲಿತ ಸಿಎಂ" ಕೂಗು ಎದ್ದಿದೆ. ಕೆಪಿಸಿಸಿ ಮಾಜಿ ಅಧ್ಯಕ್ಷ , ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮಾತನಾಡಿ ತಮಗೆ ಮೂರು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿತ್ತು. ಆದರೆ ಈಗ ಬೇಡ ಎಂದ್ರೂ ನನ್ನನ್ನು ಉಪಮುಖ್ಯಮಂತ್ರಿ ಎಂದು ಅಧಿಕಾರ ನೀಡಿದ್ದಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಗರದ  ಶಿವಯೋಗಿ ಮಂದಿರದ ಆವರಣದಲ್ಲಿ ನಡೆದ ಛಲವಾದಿ ಮಹಾಸಭಾದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಪರಮೇಶ್ವರ "ಅನಾದಿ ಕಾಲದಿಂದ ದ;ಲಿತರು ತುಳಿತಕ್ಕೊಳಗಾಗುತ್ತ ಬಂದಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಹ ದಲಿತರನ್ನು ತುಳಿಯುತ್ತಿರುವುದು ಕಾಣುತ್ತಿದೆ. ರಾಜ್ಯ ಏಕೀಕರಣಗೊಂಡು ಇಷ್ಟೂ ವರ್ಷಗಳಲ್ಲಿ ಒಮ್ಮೆಯೂ ದಲಿತ ವ್ಯಕ್ತಿ ಮ್ಮುಖ್ಯಮಂತ್ರಿ ಆಗಿಲ್ಲ" ಅವರು ಹೇಳಿದ್ದಾರೆ.
"ಮಲ್ಲಿಕಾರ್ಜುನ ಖರ್ಗೆ ಸೇರಿ ಯಾವ ನಾಯಕರಿಗೂ ಈ ಅವಕಾಶ ಸಿಕ್ಕಿಲ್ಲ.ಆದರೆ ನಮ್ಮನ್ನು ತುಳಿಯುವುದು ಅವ್ಯಾಹತವಾಗಿ ನಡೆದಿದೆ. ಬಸವಲಿಂಗಪ್ಪ, ಕೆ.ಎಚ್. ವಿಶ್ವನಾಥ್, ಮಲ್ಲಿಕಾರ್ಜುನ ಖರ್ಗೆ ಎಲ್ಲರಿಗೂ ಸಿಎಂ ಆಗೋ ಚಾನ್ಸ್ ತಪ್ಪಿ ಹೋಗಿದೆ. ನನಗೆ ಮೂರು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿದೆ. ಈಗ ಬೇಡ ಎಂದರೂ ಡಿಸಿಎಂ ಹುದ್ದೇಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಇನ್ನೂ ಎಷ್ಟು ಸಹಿಸಿಕೊಳ್ಲಲಿ?"
ಇನ್ನು ಕೆಲವು ಅಧಿಕಾರಿಗಳು ಈ ತಾರತಮ್ಯದಿಂದ ಬೇಸತ್ತು ಆತ್ಮಹತ್ಯೆಗೆ ಶರಣಗಿದ್ದಾರೆ ಎಂದೂ ಪರಮೇಶ್ವರ ಗಂಭೀರ ಆರೋಪ ಮಾಡಿದ್ದಾರೆ."ಮುಂದಿನ ವಾರಗಳಲ್ಲಿ  ನಮ್ಮ ಸರ್ಕಾರ ಬಡ್ತಿಯಲ್ಲಿ ಮೀಸಲಾತಿ ತರುವ ನಿಯಮಗಳನ್ನು ರೂಪಿಸಲಿದೆ"ಅವರು ಹೇಳಿದರು.
ಸೀಟು ಹಂಚಿಕೆಗಾಗಿ ಇಂದು ಸಭೆ
ಈ ನಡುವೆ ರಾಜ್ಯ ಸಮ್ಮಿಶ್ರ ಸರ್ಕಾರ ಮುಂಬರುವ ಲೋಕಸಭೆಚುನಾವಣೆಗಾಗಿ ತಯಾರಾಗುತ್ತಿದೆ. ಸೋಮವಾರ ಚುನಾವಣೆಗಾಗಿ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಚರ್ಚಿಸಲು  ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಗಳು ಜೆಡಿಎಸ್ ನ ಇಬ್ಬರು ಪ್ರಧಾನ ನಾಯಕರನ್ನು ಭೇಟಿಯಾಗಲಿದ್ದಾರೆ. ಸೀಟು ಹಂಚಿಕೆ ಸಂಬಂಧ ಗೊಂದಲ ಶೀಘ್ರ ಪರಿಹಾರವಾಗಲಿದೆ ಎಂದು ಪರಮೇಶ್ವರ ಹೇಳಿದ್ದಾರೆ.
SCROLL FOR NEXT