ರಮೇಶ್ ಜಾರಕಿಹೊಳಿ 
ರಾಜಕೀಯ

ಸಿಗದ ಮ್ಯಾಜಿಕ್ ನಂಬರ್ ಶಾಸಕರು: ಬರಿಗೈಲಿ ಬೆಂಗಳೂರಿಗೆ ವಾಪಸಾದ ರಮೇಶ್ ಜಾರಕಿಹೊಳಿ

ಸಚಿವ ಸ್ಥಾನ ಕಳೆದುಕೊಂಡು ಸತತ ಒಂದು ವಾರದ ಕಾಲ ಪ್ರಯತ್ನ ನಡೆಸಿದರೂ ರಮೇಶ್ ಜಾರಕಿಹೊಳಿಗೆ ಮ್ಯಾಜಿಕ್ ನಂಬರ್ ಎಂದೆನಿಸಿರುವ 15 ಶಾಸಕರನ್ನು...

ಬೆಳಗಾವಿ: ಸಚಿವ ಸ್ಥಾನ ಕಳೆದುಕೊಂಡು ಸತತ ಒಂದು ವಾರದ ಕಾಲ ಪ್ರಯತ್ನ ನಡೆಸಿದರೂ ರಮೇಶ್ ಜಾರಕಿಹೊಳಿಗೆ ಮ್ಯಾಜಿಕ್ ನಂಬರ್ ಎಂದೆನಿಸಿರುವ 15 ಶಾಸಕರನ್ನು ಬಿಜೆಪಿ ಕ್ಯಾಂಪ್ ಗೆ ಕರೆ ತರಲು ವಿಫಲರಾಗಿದ್ದಾರೆ. ಹೀಗಾಗಿ ಅವರು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರದವರೆಗೂ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ, ಬುಧವಾರ ಗೋಕಾಕ್ ಗೆ ಆಗಮಿಸಿದ ರಮೇಶ್ ಕೆಲ ಕಾಲ ಮನೆಯಲ್ಲಿದ್ದರು ನಂತರ ಮಧ್ಯಾಹ್ನ ಬೆಂಗಳೂರಿಗೆ ತೆರಳಿದರು.

ಕುತೂಹಲವೆಂದರೇ ಅವರ ಸಹೋದರು ಸತೀಶ್ ಜಾರಕಿಹೊಳಿ ಕೂಡ ಪ್ರತ್ಯೇಕವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಇಬ್ಬರು ಸಹೋದರರು ಡಾ. ಪರಮೇಶ್ವರ್ ಸೇರಿದಂತೆ ಕೆಪಿಸಿಸಿ ನಾಯಕರನ್ನು ಭೇಟಿ ಮಾಡಲಿದ್ದಾರೆ.

ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿರುವ ಸತೀಶ್ ಜಾರಕಿಹೊಳಿ ಗುರುವಾರ ರಮೇಶ್ ಜೊತೆಯಾಗಲಿದ್ದಾರೆ, ನಂತರ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ