ರಾಜಕೀಯ

ದೇವೇಗೌಡರು ಭಸ್ಮಾಸುರ, ಅವರು ಕೈ ಇಟ್ಟರೆ ಕಥೆ ಮುಗೀತು: ಬಸನಗೌಡ ಪಾಟೀಲ್ ಯತ್ನಾಳ್

Raghavendra Adiga
ವಿಜಯಪುರ: ಜೆಡಿಎಸ್ ಮುಖ್ಯಸ್ಥ, ಮಾಜಿ ಪ್ರಧಾನಿ ದೇವೇಗೌಡರು ಭಸ್ಮಾಸುರನಿದ್ದಂತೆ, ಅವರು ಕೈ ಇಟ್ಟರೆ ಕಥೆ ಮುಗೀತು ಎಂದೇ ಅರ್ಥ - ಹೀಗೊಂದು ಹೇಳುವ ಮೂಲಕ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದವನ್ನು ಸೃಷ್ಟಿಸಿದಾರೆ.
ವಿಜಯಪುರದಲ್ಲಿ ಮಾದ್ಯಮದವರೋಡನೆ ಮಾತನಾಡಿದ ಯತ್ನಾಳ್ "ದೇವೇಗೌಡರು ಭಸ್ಮಾಸುರನಿದ್ದ ಹಾಗೆ, ಅವರು ಯಾರ ತಲೆ ಮೇಲೆ ಕೈ ಡುತ್ತಾರೋ ಅವರ ಕಥೆ ಮುಗಿಯಿತೆಂದೇ ಅರ್ಥ. ಇದಾಗಲೇ ಅವರು ಕಾಂಗ್ರೆಸ್ ತಲೆ ಮೇಲೆ ಕೈ ಇಟ್ಟಿದ್ದಾರೆ. ಸದ್ಯವೇ ಕಾಂಗ್ರೆಸ್ ಸಹ ಭಸ್ಮವಾಗಲಿದೆ, ಅವರು ಯಾವಾಗ ಏನು ಮಾಡ್ತಾರೆ ಎನ್ನುವುದು ತಿಳಿಉಯುವುದಿಲ್ಲ. ಈಗ ಮೋದಿಯನ್ನು ಭೇಟಿಯಾಗುವ ಮೂಲಕ ಕಾಂಗ್ರೆಸ್ ಗೆ ಬೆದರಿಕೆ ಹಾಕುತ್ತಿದ್ದಾರೆ" ಎಂದಿದ್ದಾರೆ.
"ಪ್ರಧಾನಿ ಮೋದಿ ಯಾವ ಕಾರಣಕ್ಕೂ ದೇವೇಗೌಡರನ್ನು ನಂಬಬಾರದು. ಅವರ ಆಟ ಬಲ್ಲವರಿಲ್ಲ, ಇದರ ಕುರಿತು ಬಿಜೆಪಿ ಮುಖಂಡರು ಎಚ್ಚರದಿಂದಿರಬೇಕು" ಎಂದು ಯತ್ನಾಳ್ ತಮ್ಮ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
"ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಕಣ್ಣೀರು ಹಾಕುವುದರಲ್ಲಿ ನಿಸ್ಸೀಮರು, ಅವರದು ರೆಡಿಮೇಡ್ ಕಣ್ಣಿರು. ಇಬ್ಬರೂ ಸದಾಕಾಲ ಝಂಡೂಬಾಂಬ್ ಹಚ್ಚಿಕೊಂಡಿರುತ್ತಾರೆ." ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ ಯತ್ನಾಳ್ ಸೋನಿಯಾ ಗಂಧಿ ಬ್ರಿಟನ್ ರಾಣಿಯ ಬಳಿಕ ಎರಡನೇ ಅತಿ ಶ್ರೀಮಂತ ಮಹಿಳೆ ಎಂದಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ ಅವರ ಪಕ್ಷವೇ ನೀರವ್ ಮೋದಿ, ಅಂಬಾನಿ, ಮಲ್ಯರಂತಹಾ ಉದ್ಯಮಿಗಳಿಗೆ ಸಹಾಯ ಮಾಡಿತ್ತು. ಈಗ ಮಾತ್ರ ಮೋದಿ ಮೇಲೆ ಆರೋಪಿಸಲಾಗುತ್ತಿದೆ ಎಂದರು.
SCROLL FOR NEXT