ರಾಜಕೀಯ

ಆಪರೇಷನ್ ಕಮಲ 'ಯಶಸ್ಸು' ಮಾಡಲು ಕಾನೂನು ಸಲಹೆ ಕೇಳಿದ ಬಿಜೆಪಿ

Shilpa D
ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ಪ್ರಯತ್ನ ಕ್ಲೈಮ್ಯಾಕ್ಸ್ ಹಂತ ತಲುಪಿದೆ.
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಗುಂಪಿನ 14 ಶಾಸಕರು, ತಮ್ಮ ಸ್ಧಾನಗಳಿಗೆ ರಾಜೀನಾಮೆ ನೀಡಲು ಬಿಜೆಪಿ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ಮುಂಬಯಿಯಲ್ಲಿರುವ ಆಪರೇಷನ್ ಕಮಲದ ರೂವಾರಿ  ಹೇಳಿದ್ದಾರೆ.
ಜಾರಕಿಹೊಳಿ ಸೇರಿದಂಕೆ ಕಾಂಗ್ರೆಸ್ ನ ಐದು ಶಾಸಕರು ಮುಂಬಯಿ ಮತ್ತು ಕೊಲ್ಹಾಪುರದ ಐಷಾರಾಮಿ ಹೋಟೇಲ್ ನಲ್ಲಿದ್ದಾರೆ, ಬಿಜೆಪಿ ನಾಯಕರು ಅವರನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟಿದ್ದಾರೆ,
ಆಪರೇಷನ್ ಕಮಲದ ರೂವಾರಿಯಾಗಿರುವ ಬಿಜೆಪಿ ನಾಯಕರು ಕಾನೂನು ಸಲಹೆ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ, ಸರ್ಕಾರ ಬೀಳಿಸುವ ಪ್ರಯತ್ನ ಬಿಜೆಪಿಗೆ ಬ್ಯಾಕ್ ಫೈರ್ ಆಗದಂತೆ ತಡೆಗಟ್ಟಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಯಡಿಯೂರಪ್ಪ ತಂಡ ನಡೆಸುತ್ತಿರುವ ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರು, ಜನವರಿ 23 ರಂದು ಡೆಡ್ ಲೈನ್ ನೀಡಿದ್ದಾರೆ, ಈಗಾಗಲೇ ಪಕ್ಷೇತರ ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ತೆಗೆದುಕೊಂಡಿರುವುದಾಗಿ ಘೋಷಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನ ನಾಲ್ಕರಿಂದ ಐದು  ಬಂಡಾಯ ಶಾಸಕರಿದ್ದು, ಅವರು ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ನೀಡಲಾರರು ಎಂದು ಬೆಳಗಾವಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
SCROLL FOR NEXT