ರಾಜಕೀಯ

ಸಂಸದೀಯ ಕಾರ್ಯದರ್ಶಿಗಳಾಗಿ 8 ಕಾಂಗ್ರೆಸ್ ಶಾಸಕರು ನೇಮಕ

Sumana Upadhyaya

ಬೆಂಗಳೂರು: ರಾಜ್ಯದ ಎಂಟು ಮಂದಿ ಶಾಸಕರು ಸಂಸದೀಯ ಕಾರ್ಯದರ್ಶಿಗಳಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದರು.

ಬೈಲಹೊಂಗಲದ ಶಾಸಕ ಮಹಂತೇಶ ಕೌಜಲಗಿ, ಖಾನಾಪುರದ ಅಂಜಲಿ ನಿಂಬಾಳ್ಕರ್, ಕೆಜಿಎಫ್ ನ ರೂಪಾ ಶಶಿಧರ್, ಕೊಪ್ಪಳ ಕ್ಷೇತ್ರದ ರಾಘವೇಂದ್ರ ಹಿತ್ನಾಳ್, ಲಿಂಗಸುಗೂರಿನ ದುರ್ಗಪ್ಪ ಹೂಲಗೇರಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬರ್, ಐವಾನ್ ಡಿಸೋಜ ಹಾಗೂ ವಿ ಗೋವಿಂದರಾಜು. ಈ ಸಂಬಂಧ ಜನವರಿ 7ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು ಅವರು ನಿನ್ನೆ ಪ್ರಮಾಣವಚನ ಸ್ವೀಕರಿಸಿದರು.

ಸಂಸದೀಯ ಕಾರ್ಯದರ್ಶಿಗಳ ನೇಮಕ ಮತ್ತು 1963ರ ಕರ್ನಾಟಕ ಸಂಸದೀಯ ಕಾರ್ಯದರ್ಶಿ ಭತ್ಯೆ ಕಾಯ್ದೆ ಅಸಂವಿಧಾನಿಕ ಎಂದು ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಸಂಸದೀಯ ಕಾರ್ಯದರ್ಶಿಗಳಿಗೆ ರಾಜ್ಯ ಸಚಿವ ಸ್ಥಾನಮಾನ ದೊರೆಯಲಿದ್ದು ಕಾರು, ಕಚೇರಿ, ಸಿಬ್ಬಂದಿ ಮತ್ತು ಡಿಎ-ಡಿಎ ಸೌಲಭ್ಯ ದೊರೆಯಲಿದೆ.

ಸಂಸದೀಯ ಕಾರ್ಯದರ್ಶಿಗಳ ನೇಮಕದಿಂದ ಅವರು ಏನು ಮಾಡುತ್ತಾರೆ ಎಂದು ನೋಡುತ್ತೇವೆ ಎಂದು ಬಿಜೆಪಿ ನಾಯಕ ಸಿ ಟಿ ರವಿ ಹೇಳಿದರೆ, ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ಎಸ್ ಪ್ರಕಾಶ್ ಆರೋಪಿಸಿದ್ದಾರೆ.

SCROLL FOR NEXT