ರಾಜಕೀಯ

ಹಲ್ಲೆ ನಡೆದು ಮೂರು ದಿನವಾದ್ರೂ ಪೊಲೀಸರಿಗೆ 'ಕೈ' ಗೆ ಸಿಕ್ಕಿಲ್ಲ ಶಾಸಕ ಗಣೇಶ್

Shilpa D
ಬೆಂಗಳೂರು: ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್​ನಲ್ಲಿ ಶಾಸಕರು ಬಡಿದಾಡಿಕೊಂಡ ಪ್ರಕರಣದ ತನಿಖೆಯನ್ನು ರಾಮನಗರ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಈ ಪ್ರಕರಣದ ಪ್ರಮುಖ ಆರೋಪಿ ಕಂಪ್ಲಿ ಶಾಸಕ ಜೆಎನ್ ಗಣೇಶ್ ತಲೆ ಮರೆಸಿಕೊಂಡಿದ್ದು, ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಮೂರು ವಿಶೇಷ ತಂಡ ರಚಿಸಿಕೊಂಡಿರುವ ಪೊಲೀಸರು ಗಣೇಶ್ ಸ್ವಕ್ಷೇತ್ರ ಕಂಪ್ಲಿಗೆ ತೆರಳಿದ್ದಾರೆ, ಆದರೆ ರಾಮನಗರದಿಂದ ಯಾವುದೇ ಅಧಿಕಾರಿಗಳು  ಬಂದಿಲ್ಲ, ಒಂದು ವೇಳೆ ಬಂದರೆ ನಾವು ಎಲ್ಲಾ ರೀತಿಯಲ್ಲೂ ,ಸಹಕರಿಸುವುದಾಗಿ ತಿಳಿಸಿದ್ದಾರೆ, ಆದರೆ ಗಣೇಶ್ ಕಂಪ್ಲಿಗೆ ಬಂದಿಲ್ಲ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.
ಇನ್ನೂ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪೊಲೀಸರು ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ, ಶಾಸಕ ರಘುಮೂರ್ತಿ, ರಾಮಪ್ಪ ಮತ್ತು ತನ್ವೀರ್ ಸೇಠ್ ಅವರ ಹೇಳಿಕೆ ಪಡೆಯಬೇಕಿದೆ, 
ಗಣೇಶ್ ಎಲ್ಲಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ರಾಮನಗರ ಎಸ್ ಪಿ  ರಮೇಶ್ ಹೇಳಿದ್ದಾರೆ. ಇನ್ನೂ ಡಿಸಿಎಂ ಪರಮೇಶ್ವರ್, ಪ್ರಕರಣದ ಬಗ್ಗೆ ತನಿಖೆ ನಡೆಸಲು ಪಕ್ಷದ ವತಿಯಿಂದ ಆಯೋಗ ರಚಿಸಿದ್ದಾರೆ, 
ಇನ್ನೂ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಪ್ರಕರಣದ ಬಗ್ಗೆ ಸಿಎಂ ಕುಮಾರ ಸ್ವಾಮಿ ವಿವರಣೆ ನೀಡಬೇಕು. ಹಾಗೂ ಜನತೆಯ ಕ್ಷಮೆ ಕೋರಬೇಕು ಎಂದು ಬಿಜೆಪಿ ಎಂಎಲ್ಸಿ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. 
SCROLL FOR NEXT