ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರದಿಂದ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷ ರಾಜ್ಯಾಧ್ಯಕ್ಷ, ನಟ, ನಿರ್ದೇಶಕ ಉಪೇಂದ್ರ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಉಪೇಂದ್ರ "ಬೇರೆ ಬೇರೆ ಪಕ್ಷಗಳು ಚುನಾವಣೆ ಪ್ರಣಾಳಿಕೆ ರಚಿಸಿ ಜನರ ಮುಂದಿಡುತ್ತದೆ. ಇದು ಸರಿಯಲ್ಲ. ಜನರಿಗೇನು ಅಗತ್ಯವೆನ್ನುವುದು ಅವರಿಗೇ ತಿಳಿದಿದೆ. ಹಾಗಾಗಿ ನಾವು ಚುನಾವಣೆ ಪ್ರಣಾಳಿಕೆ ರಚಿಸದೆ ಜನರಿಂದಲೇ ತಿಳಿದು ಅದರಂತೆ ಕೆಲಸ ಮಾಡುತೇವೆ" ಎಂದರು.
ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರನ್ನೇ ಜನ ಆಯ್ಕೆ ಮಾಡಬೇಕ್ಕು.ನಮ್ಮ ಅಭ್ಯರ್ಥಿಗಳು ನಿರಂತರವಾಗಿ ಜನರ ಸಂಪರ್ಕದಲ್ಲಿರುತ್ತಾರೆ. ಅವರು ಜನರ ಸಮಸ್ಯೆಗಳೇನೆನ್ನುವುದು ಅರಿತಿರುತ್ತಾರೆ. ನಿಜ ಹೇಳಬೇಕು ಅಂದ್ರೆ ಅವರೇ ನಮ್ಮ ಪ್ರಣಾಳಿಕೆ ಆಗಿರುತ್ತಾರೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.
ನಮ್ಮ ಚಿಹ್ನೆ ಆಟೋರಿಕ್ಷಾ ಆಗಿದ್ದು ನಮಗೇನೂ ಗೊತ್ತಿಲ್ಲ, ನಾವೇನೂ ಮಾಡೊಲ್ಲ, ನೀವು ಹೇಳೋದು ಬಿಟ್ಟು.... ಇದು ನಮ್ಮ ಧ್ಯೇಯವಾಕ್ಯ. ಇದೇ ಧ್ಯೇಯದೊಡನೆ ನಾವು ರಾಜ್ಯದ ಎಲ್ಲಾ 28 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics