ಸಿದ್ದರಾಮಯ್ಯ, ಮಹಿಳೆ 
ರಾಜಕೀಯ

ಮಗನ ವಿರುದ್ಧ ದೂರು: ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲ

ಜನರ ಸಮಸ್ಯೆ ಆಲಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಮಗ, ವರುಣ ಕ್ಷೇತ್ರದ ಶಾಸಕ ಯತಿಂದ್ರ ಅವರು ವಿರುದ್ಧ ದೂರು ನೀಡಿದ ಮಹಿಳೆ ಮೇಲೆ ಮಾಜಿ ಮುಖ್ಯಮಂತ್ರಿ....

ಮೈಸೂರು: ಜನರ ಸಮಸ್ಯೆ ಆಲಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಮಗ, ವರುಣ ಕ್ಷೇತ್ರದ ಶಾಸಕ ಯತಿಂದ್ರ ಅವರು ವಿರುದ್ಧ ದೂರು ನೀಡಿದ ಮಹಿಳೆ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನ ಅವರು ಕೆಂಡಾಮಂಡಲವಾಗಿದ್ದು, ಎಲ್ಲರ ಎದುರಲ್ಲೇ ಆವಾಜ್ ಹಾಕಿದ ಘಟನೆ ಸೋಮವಾರ ನಡೆದಿದೆ.
ಸಿದ್ದರಾಮಯ್ಯ ಅವರು ಇಂದು ಟಿ.ನರಸೀಪುರದ ಗರ್ಗೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಮಾಜಿ ತಾ.ಪಂ. ಉಪಾಧ್ಯಕ್ಷೆ ಹಾಗೂ ಕಾಂಗ್ರೆಸ್​​ನ ಕಾರ್ಯಕರ್ತೆ ಜಮಲಾರ್ ಎಂಬ ಮಹಿಳೆ, ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ನೀವೂ ಕೈಗೆ ಸಿಗಲ್ಲ. ಶಾಸಕರಾಗಿರುವ ನಿಮ್ಮ ಮಗನೂ ಕೈಗೆ ಸಿಗಲ್ಲ. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳೋಣ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದರು. 
ಈ ಸಂದರ್ಭದಲ್ಲಿ ಮಹಿಳೆ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಅವರ ಎದುರಿಗಿದ್ದ ಮೇಜನ್ನು ಕುಟ್ಟಿ ಆಕ್ರೋಶಭರಿತರಾಗಿ ಮಾತನಾಡುತ್ತಿದ್ದರು. ಇದನ್ನು ಕಂಡು ಕೋಪಗೊಂಡ ಸಿದ್ಧರಾಮಯ್ಯ ಅವರು ಆ ಮಹಿಳೆಯ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು, ‘ಕೂತ್ಕೋಳಮ್ಮ ಸಾಕು.. ನನ್ನ ಮುಂದೇನೆ ಟೇಬಲ್ ಕುಟ್ಟುತ್ತೀಯಾ… ದೇಶಕ್ಕೆ ಅನ್ಯಾಯ ಮಾಡಿರೋ ತರ ಮಾತಾಡ್ತೀಯಲ್ಲಾ…?’ ಎಂದು ಗದರಿಸಿದ್ದು, ಅದರ ವಿಡಿಯೋ ಇದೀಗ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT