ಎಚ್.ಡಿ.ಕುಮಾರಸ್ವಾಮಿ 
ರಾಜಕೀಯ

ಕರ್ನಾಟಕ ರಾಜಕೀಯ: ಮೈತ್ರಿ ಸರ್ಕಾರದ ಪಾಲಿಗೆ ಪ್ರತಿಷ್ಥೆಯಾದ ಹಣಕಾಸು ಮಸೂದೆ!

ಕರ್ನಾಟಕದ ಜೆಡಿ (ಎಸ್) -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ತು ಗೊಂದಲಗಳೇ ಮುಂದುವರಿದಿದೆ. ಕಾಂಗ್ರೆಸ್ ನ ನಾಲ್ವರು ಶಾಸಕರ ಬಂಡಾಯ ಸೇರಿ ಸರ್ಕಾರಕ್ಕೆ ಬಹುಮತ....

ಬೆಂಗಳೂರು: ಕರ್ನಾಟಕದ ಜೆಡಿ (ಎಸ್)-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ತು ಗೊಂದಲಗಳೇ ಮುಂದುವರಿದಿದೆ. ಕಾಂಗ್ರೆಸ್ ನ ನಾಲ್ವರು ಶಾಸಕರ ಬಂಡಾಯ ಸೇರಿ ಸರ್ಕಾರಕ್ಕೆ ಬಹುಮತ ಇದೆಯೇ, ಇಲ್ಲವೆ ಎಂಬ ಗೊಂದಲವೇ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿದೆ. ಆದರೆ ಇದೆಲ್ಲದರ ನಡುವೆಯೇ ಫೆಬ್ರವರಿ 8ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಣಕಾಸು ಮಸೂದೆಯನ್ನು ಮಂಡಿಸಲಿದ್ದಾರೆ. ಈ ಮಸೂದೆ ಸದನದಲ್ಲಿ ಅಂಗೀಕಾರವಾಗುವುದು ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಿಗೆ ಅತಿ ಮುಖ್ಯವಾಗಿದ್ದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆ ಎನಿಸಿದೆ. ಒಂದು ವೇಳೆ ಸದನದಲ್ಲಿ ಮಸೂದೆ  ಅಂಗೀಕಾರವಾಗದೆ ಹೋದಲ್ಲಿ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಕೊಡಲಿ ಏಟು ಎಂದೂ ಹೇಳಲಾಗುತ್ತಿದೆ.
ಸದನದಲ್ಲಿ ಪಕ್ಷೇತರ ಶಾಸಕರಿಬ್ಬರು ಬಿಜೆಪಿ ಬೆಂಬಲಕ್ಕಿರುವ ಕಾರಣ ಬಿಜೆಪಿ ಬಲ 106ಕ್ಕೇರಿದೆ. ಇದೇ ವೇಳೆ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು 118 ರಷ್ಟಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ರಮೇಶ್ ಜಾರಕಿಹೋಳಿ, ಉಮೇಶ್ ಜಾಧವ್ ಸೇರಿ ನಾಲ್ಕು ಅತೃಪ್ತ ಶಾಸಕರ ನಡೆ ಇನ್ನೂ ಸ್ಪಷ್ಟವಾಗಿಲ್ಲ.ಸದನದಲ್ಲಿ ಹಣಕಾಸು ಮಸೂದೆ ಅಂಗೀಕಾರಕ್ಕೆ ಸಮ್ಮಿಶ್ರ ಸರ್ಕಾರಕ್ಕೆ ಕನಿಷ್ಟ 107ಶಾಸಕರ ಬೆಂಬಲ ಬೇಕು.ರಾಜಕೀಯ ವಿಶ್ಲೇಷಕರ ಪ್ರಕಾರ ಇದೇನೂ ಕಠಿಣವಲ್ಲ. ಆದರೆ ಪರಿಸ್ಥಿತಿ ಯಾವ ರೀತಿಯಾಗಿ ತಿರುಗಲಿದೆ ಎನ್ನುವುದು ಇನ್ನೂ ತಿಳಿಯಲು ಸಾದ್ಯವಿಲ್ಲ.
"ಸರ್ಕಾರ ಹಣಕಾಸು ಮಸೂದೆಯನ್ನು ಪಾಸ್ ಮಾಡಲು ವಿಫಲವಾದರೆ ಹಿಂದಿನ ಪರಂಪರೆಯ ಅನುಸಾರ ರಾಜೀನಾಮೆ ನಿಡಬೇಕಾಗುತ್ತದೆ.ಈಗ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಕಾಣಿಸುತ್ತಿದೆ. ಆದರೆ ಕಾಂಗ್ರೆಸ್ ನ ನಾಲ್ವರು ಶಾಸಕರು ಏನು ಮಾಡಲಿದ್ದಾರೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಅಲ್ಲದೆ ರಾಜಕೀಯದಲ್ಲಿ ಏನೂ ಆಗಲು ಸಾಧ್ಯ.ಅವರೇನಾದರೂ ಅಡ್ಡ ಮತದಾನ ಮಾಡಿದರೆ ಅಥವಾ ಹಾಜರಾಗದಿದ್ದರೆ ಸ್ಪೀಕರ್ ಅವರನ್ನು ತಕ್ಷಣ ವಜಾ ಮಾಡಲೂ ಸಾದ್ಯ." ರಾಜಕೀಯ ವಿಶ್ಲೇಷಕ ಪ್ರೊಫೆಸರ್ ನರೇಂದ್ರ ಪಾಣಿ ಹೇಳಿದ್ದಾರೆ.
ಸಂಖ್ಯೆಗಳ ಬಗ್ಗೆ ಖಚಿತವಾಗಿರುವುದರ ಹೊರತಾಗಿಯೂ, ಸರ್ಕಾರಕ್ಕೆ ಯಾವ ಅಪಾಯವಾಗುವುದು ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಿಗೆ ಬೇಕಿಲ್ಲ."ಹಣಕಾಸು ಮಸೂದೆ ವಿಚಾರವಾಗಿ ಬಿಜೆಪಿಗೆ ಲಾಭವಾಗುವಂತೆ ನಡೆದುಕೊಳ್ಲಲು ನಾವು ಬಿಡುವುದಿಲ್ಲ.ನಮ್ಮ ಅತೃಪ್ತ ಶಾಸಕರ ಬಗೆಗೆ ನಾವು ಕೆಲ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೇವೆ. ಈ ಮೂಲಕ ಸಂಭವನೀಯ ತೊಂದರೆಯಿಂದ ಸರ್ಕಾರವನ್ನು ಪಾರು ಮಾಡಿಸುತ್ತೇವೆ"ಕಾಂಗ್ರೆಸ್ ನ ಹಿರಿಯ ಮುಖಂಡ ಹೇಳಿದರು.
ಕುದುರೆ ವ್ಯಾಪಾರದ ಆರೋಪದ ಮಧ್ಯೆ, ಎಲ್ಲ ಮೂರು ಪಕ್ಷಗಳು ತಮ್ಮ ಶಾಸಕರ ಸಂಖ್ಯಾಬಲದ ಬಗ್ಗೆ ಎಚ್ಚರದಿಂದಿದೆ. 
ಯಡಿಯೂರಪ್ಪ ನಿವಾಸದಲ್ಲಿ ಸಭೆ
ಕಾಂಗ್ರೆಸ್-ಜೆಡಿ (ಎಸ್) ಒಕ್ಕೂಟವು ಹಣಕಾಸು ಮಸೂದೆ ಮಂಡನೆ ಸಿದ್ದತೆಯಲ್ಲಿರುವಾಗ ಇದನ್ನು ಎದುರಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಹೇಗೆಂದು ಚರ್ಚಿಸಲು ಬಿಜೆಪಿ ಹಿರಿಯ ಮುಖಂಡರುಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಬೆಂಗಳೂರಿನ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಆರ್ ಅಶೋಕ್, ಅರವಿಂದ ಲಿಂಬಾವಳಿ, ವಿ ಸೋಮಣ್ಣ ಸೇರಿ ಅನೇಕರು ಮಾಜಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಸೇರಿದ್ದಾರೆ ಎನ್ನಲಾಗಿದೆ. ಈ ನಡುವೆ ಯಡಿಯೂರಪ್ಪ ಅವರ ಆರೋಗ್ಯ ವಿಚಾರಿಸಲು ಮಾತ್ರವೇ ಅವರ ಆಪ್ತರು, ಪಕ್ಷದ ಹಿರಿಯರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಇದು ಯ್ತಾವ ರಾಜಕೀಯ ಚರ್ಚೆಗಾಗಿ ಅಲ್ಲ ಎಂದೂ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT