ಮಾಜಿ ಸಿಎಂ ಸಿದ್ದರಾಮಯ್ಯ 
ರಾಜಕೀಯ

ನಿಮ್ಮ ಶಾಸಕರ ರಾಜೀನಾಮೆ ನಿಮ್ಮ ನಾಯಕತ್ವಕ್ಕೆ ಕೊಟ್ಟ ಏಟು: ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು

ಕಾಂಗ್ರೆಸ್ ನ ಇಬ್ಬರು ಶಾಸಕರ ರಾಜೀನಾಮೆ ನಾಟಕ ಬಿಜೆಪಿ ನಾಯಕರು ಹೆಣೆದಿರುವ ಕುತಂತ್ರ...

ಬೆಂಗಳೂರು: ಕಾಂಗ್ರೆಸ್ ನ ಇಬ್ಬರು ಶಾಸಕರ ರಾಜೀನಾಮೆ ನಾಟಕ ಬಿಜೆಪಿ ನಾಯಕರು ಹೆಣೆದಿರುವ ಕುತಂತ್ರ. ರಾಜ್ಯದ ಜನತೆ ತೀರ್ಪು ನೀಡದಿರುವಾಗ ಹತಾಶೆಯಿಂದ ಹಿಂಬಾಗಿಲಿನಿಂದ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.
ನಿಮಗೆ 78 ಸೀಟು ಇರುವಾಗ ವಿಧಾನಸಭೆಯಲ್ಲಿ ಕೂರಲು ಈ ರಾಜ್ಯದ ಜನತೆ ತೀರ್ಪು ನೀಡಿದ್ದಾರೆ ಎಂದು ನೀವು ಹೇಳುತ್ತಿರುವುದೇ? ಕಳೆದ ಒಂದು-ಒಂದೂವರೆ ವರ್ಷದಿಂದ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳನ್ನು ಈ ರಾಜ್ಯದ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದಾರೆ.
ಅಧಿಕಾರ ಪಡೆಯುವ ಲಾಲಸೆಯಿಂದ ತಮ್ಮ ಆತ್ಮ ಗೌರವವನ್ನು ಬಿಟ್ಟು ಜೆಡಿಎಸ್ ಮುಂದೆ ಶರಣಾಗಿ ಕೈಮುಗಿದು ನಿಂತು ಹಿಂಬಾಗಿಲಿನಿಂದ ಹೋಗಿ ರಾಹುಲ್ ಗಾಂಧಿಯವರು ಅಧಿಕಾರ ಹೇಗೆ ಗಿಟ್ಟಿಸಿಕೊಂಡರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ನಿಮ್ಮ ಶಾಸಕರ ರಾಜೀನಾಮೆ ನಿಮ್ಮ ನಾಯಕತ್ವದ ಮೇಲೆ ಕೊಟ್ಟ ಏಟು ಎಂದು ಬಿಜೆಪಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮಹಾತ್ಮಾ ಗಾಂಧಿ ಹೆಸರು: ಸಿಎಂ ಸಿದ್ದರಾಮಯ್ಯ ಘೋಷಣೆ

ಶಿವಮೊಗ್ಗ: ನಡುರಸ್ತೆಯಲ್ಲೇ ಹೊತ್ತಿ ಉರಿದ ಖಾಸಗಿ ಬಸ್, 8 ಮಂದಿಗೆ ಗಾಯ, ಪ್ರಯಾಣಿಕರ ಜೀವ ಕಾಪಾಡಿದ ಚಾಲಕನ ಸಮಯ ಪ್ರಜ್ಞೆ-Video

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರದಲ್ಲೇ ಸಭೆ: ಜನಪ್ರತಿನಿಧಿಗಳಿಗೆ ಫಾಸ್ಟ್ಯಾಗ್ ಸೌಲಭ್ಯ ಕಲ್ಪಿಸಲು ಸಹಕಾರ

ಪಕ್ಷದ ಕಚೇರಿ ನಿರ್ಮಾಣದಲ್ಲಿ ಆಸಕ್ತಿ ತೋರದವರ ಬಗ್ಗೆ 2 ದಿನಗಳಲ್ಲಿ AICC ಗೆ ಲಿಖಿತ ಮಾಹಿತಿ: ಡಿ.ಕೆ. ಶಿವಕುಮಾರ್

'ನಾಚಿಕೆಗೇಡಿನ ಸಂಗತಿ'; ಎಲ್ಲಾ ಪಕ್ಷಗಳ ದೊಡ್ಡ ಕುಳಗಳು 'ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿ': ಪರಮೇಶ್ವರ್

SCROLL FOR NEXT