ಮೈಸೂರು: ಅಭಿಮಾನಿಯೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎವರ್ ಗ್ರೀನ್ ಸಿಎಂ ಎಂದಿದ್ದು, ಸಿದ್ದರಾಮಯ್ಯ ನಡೆಯೋ ಮೂದೇವಿ ಎಂದು ಪ್ರೀತಿಯಿಂದ ಕೆನ್ನೆಗೆ ತಟ್ಟಿರುವ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.
ಮೈಸೂರಿನಲ್ಲಿ ಕಾರ್ಯಕರ್ತರ ಸಭೆಗಾಗಿ ಸಿದ್ದರಾಮಯ್ಯ ಗೋಲ್ಡನ್ ಕಲರ್ ಗ್ಲಾಸ್ ಹಾಕಿಕೊಂಡು ಬಂದಿದ್ದರು. ಈ ವೇಳೆ ಸಿದ್ದರಾಮಯ್ಯರನ್ನ ನೋಡಿ ಪುಳಕಿತನಾದ ಅಭಿಮಾನಿ, ನೀವು ಎವರ್ ಗ್ರೀನ್ ಸಿಎಂ ಎಂದಿದ್ದಾನೆ.ಈ ವೇಳೆ ಅಭಿಮಾನಿಯ ಕೆನ್ನೆ ತಟ್ಟಿದ ಸಿದ್ದರಾಮಯ್ಯ ನಡೆಯೋ ಮೂದೇವಿ ಎಂದು ನಯವಾಗಿ ಗದರಿದ್ದಾರೆ,
ಬಿಜೆಪಿಯವರು ಆಪರೇಷನ್ ಕಮಲ ಮಾಡ್ತಿರೋದು ಸತ್ಯ. ನಮ್ಮವರಿಗೆ, ಜೆಡಿಎಸ್ ಶಾಸಕರಿಗೆ ಕೋಟಿ ಕೋಟಿ ರೂ. ಆಫರ್ ಮಾಡಿರೋದು ನಿಜ. ಪಿರಿಯಾಪಟ್ಟಣ ಶಾಸಕ ಮಹದೇವು ನನಗೆ 30ಕೋಟಿ ರೂ. ಕೊಡುವುದಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ.