ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ರಾಜೀನಾಮೆ ಪರ್ವ ಪ್ರಾರಂಭಿಸಿದ್ದೇ ರಾಹುಲ್, ಕರ್ನಾಟಕ ಬಿಕ್ಕಟ್ಟಿಗೆ ನಾವು ಹೊಣೆಯಲ್ಲ: ರಾಜನಾಥ್ ಸಿಂಗ್

ಕರ್ನಾಟಕದಲ್ಲಿ ರಾಜಕೀಯದ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು ದೋಸ್ತಿ ಸರ್ಕಾರದ ಇಪ್ಪತ್ತೊಂದು ಸಚಿವರೂ ರಾಜೀನಾಮೆ ನಿಡಿದ್ದಾರೆ. ಆದರೆ ಈ ರಾಜಕೀಯ ಬಿಕ್ಕಟ್ಟಿಗೂ, ಬಿಜೆಪಿಗೂ ಸಂಬಂಧವಿಲ್ಲ

ರಾಜನಾಥ್ ಸಿಂಗ್, ರಾಹುಲ್ ಗಾಂಧಿ
Raghavendra Adiga
Updated On : 8 Jul 2019, 1:57 am
ನವದೆಹಲಿ: ಕರ್ನಾಟಕದಲ್ಲಿ ರಾಜಕೀಯದ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು ದೋಸ್ತಿ ಸರ್ಕಾರದ ಇಪ್ಪತ್ತೊಂದು ಸಚಿವರೂ ರಾಜೀನಾಮೆ ನಿಡಿದ್ದಾರೆ.  ಆದರೆ ಈ ರಾಜಕೀಯ ಬಿಕ್ಕಟ್ಟಿಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು  ಕೇಂದ್ರ ಸಚಿವ ರಾಜನಾಥ್ ಸಿಂಗ್ ಇಂದು ಸಂಸತ್ತಿನಲ್ಲಿ ಪ್ರತಿಪಾದಿಸಿದ್ದಾರೆ.
"ನಮ್ಮ ಪಕ್ಷವು ಬೇರೆ ಯಾವುದೇ ಪಕ್ಷದ ಶಾಸಕರ ಮೇಲೆ  ಒತ್ತಡ ಹೇರಿಲ್ಲ. ಈ ರಾಜೀನಾಮೆ ನಾಟಕ ಪ್ರಾರಂಭಿಸಿದ್ದೇ ರಾಹುಲ್ ಗಾಂಧಿ " ರಾಜನಾಥ್ ಸಿಂಗ್ ಹೇಳಿದ್ದಾರೆ.
"ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಅದಕ್ಕೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ನಮ್ಮ ಪಕ್ಷ ಎಂದಿಗೂ ಕುದುರೆ ವ್ಯಾಪಾರದಲ್ಲಿ ತೊಡಗಿಲ್ಲ. ಸಂಸದೀಯ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ರಾಜೀನಾಮೆ ಸಲ್ಲಿಸುವ ಪ್ರವೃತ್ತಿಯನ್ನು ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಪ್ರಾರಂಭಿಸಿದರು, ಅದನ್ನು ನಾವು ಪ್ರಾರಂಭಿಸಿಲ್ಲ. ರಾಜೀನಾಮೆ ಸಲ್ಲಿಸುವಂತೆ ಅವರು ಸ್ವತಃ ತಮ್ಮ ಪಕ್ಷದವರನ್ನೇ ಕೇಳಿದ್ದಾರೆ. ಅದರಂತೆ ಕಾಂಗ್ರೆಸ್ ನ ಹಿರಿಯ ನಾಯಕರೂ ರಾಜೀನಾಮೆ ಸಲ್ಲಿಸುತ್ತಿದ್ದಾರೆ. " ಸಿಂಗ್ ಹೇಳಿದ್ದಾರೆ.

Advertisement

Advertisement

ರಾಜ್ಯದ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳ ಒಟ್ತಾರೆ 13 ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕ ಆಡಳಿತಾರೂಢ ಮೈತ್ರಿ ಸರ್ಕಾರ ಬಿಕ್ಕಟ್ಟಿನಲ್ಲಿ ಸಿಲುಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement