ರಾಜಕೀಯ

ಅತೃಪ್ತ ಶಾಸಕರ ಪರ ಸುಪ್ರೀಂ ತೀರ್ಪು: ಬಿಜೆಪಿ ವಿಶ್ವಾಸ

Raghavendra Adiga
ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿದ ಶಾಸಕರ ಅರ್ಜಿ ವಿಚಾರಣೆಯ ವಾದ- ಪ್ರತಿವಾದ ಆಲಿಸಿದ ಬಿಜೆಪಿ ಶಾಸಕರಲ್ಲಿ ಸಂತಸ ಅರಳಿಸಿದೆ. ನಾಳೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅತೃಪ್ತ ಶಾಸಕರ ಪರ ಬರಲಿದೆ ಎಂದು ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಮಡಾ ಹೋಟೇಲಿನ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಕುಡುಚಿ ಶಾಸಕ ರಾಜೀವ್, ಮುಖುಲ್ ರೋಹ್ಟಗಿ ಅವರ ವಾದ ಗಮನಿಸಿದ ನಂತರ ಮೈತ್ರಿ ಸರ್ಕಾರ ಸ್ಪೀಕರ್ ಅವರನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ.ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಅವರ ಸ್ವತಂತ್ರ ನಿರ್ಧಾರಕ್ಕೆ ಬಿಟ್ಟದ್ದಾಗಿದೆ.ನಮಗೆ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಇಡೀ ರಾಜ್ಯದ ಜನರು ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ. ಜನರ ನಿರೀಕ್ಷೆ ಆದಷ್ಟು ಶೀಘ್ರದಲ್ಲಿ ಈಡೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸಿಟಿ ರವಿ, ಮೂವರೂ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಅದ್ಭುತವಾಗಿ ವಾದ ಮಂಡನೆ ಮಾಡಿದ್ದಾರೆ. ನಾಳೆ ಅಂತಿಮ ತೀರ್ಪು ಹೊರಬೀಳಲಿದ್ದು, ತೀರ್ಪು ಏನೇ ಬಂದರೂ ರಾಜ್ಯ ಮೈತ್ರಿ ಸರ್ಕಾರವಂತೂ ಉಳಿಯುವುದಿಲ್ಲ.ಗುರುವಾರ ಸಂಜೆ ವೇಳೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇತಿಹಾಸದ ಪುಟ ಸೇರಲಿದೆ ಎಂದು ವ್ಯಂಗ್ಯವಾಡಿದರು.
SCROLL FOR NEXT