ರಾಜಕೀಯ

ನಮ್ಮನ್ನು ಬಿಟ್ಬಿಡಿ, ಊಟ ಮಾಡಿಲ್ಲ, ಶುಗರ್ ಇದೆ.. ಶಾಸಕರ ಮನವಿ; ಕಲಾಪ ಮುಂದೂಡಿಕೆ; ಸಂಜೆ 6ಕ್ಕೆ ಡೆಡ್ ಲೈನ್

Srinivas Rao BV
ಬೆಂಗಳೂರು: ಕರ್ನಾಟಕದ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಯ ಹೈಡ್ರಾಮಾ ಸೋಮವಾರವೂ ಮುಗಿಯದೇ ಸ್ಪೀಕರ್ ರಮೇಶ್ ಕುಮಾರ್ ಕಲಾಪವನ್ನು ಜು.23 ಕ್ಕೆ ಮುಂದೂಡಿಕೆ ಮಾಡಿದ್ದಾರೆ. 
ಸಿಎಂ ಗೆ ನೀಡಲಾಗಿದ್ದ ಗಡುವು ಬದಲಾಗಿದ್ದು, ಸ್ಪೀಕರ್ ಮಂಗಳವಾರ ಸಂಜೆ 6ಕ್ಕೆ ವಿಶ್ವಾಸಮತ ಯಾಚನೆಗೆ ಡೆಡ್ ಲೈನ್ ಫಿಕ್ಸ್ ಮಾಡಿದ್ದಾರೆ.
ಜು.22ರ ಕಲಾಪದಲ್ಲಿ, ದಿನವಿಡೀ ಹೇಳಿದ್ದನ್ನೇ ಹೇಳಿ ಸದನದ ಸಮಯ ತಳ್ಳಿದ ದೋಸ್ತಿ ಸರ್ಕಾರದ ಶಾಸಕರು ವಿಶ್ವಾಸಮತದ ಮೇಲೆ ಮತ್ತಷ್ಟು ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದರು. 
ರಾತ್ರಿ 9 ಕ್ಕೆ ಪ್ರಾರಂಭವಾದ ಕಲಾಪದಲ್ಲೂ ಆಡಳಿತ ಪಕ್ಷದ ಶಾಸಕರು ಗದ್ದಲ ಉಂಟುಮಾಡಿದರು. ಅಷ್ಟೇ ಅಲ್ಲದೇ ವಿಪಕ್ಷ ನಾಯಕ ಯಡಿಯೂರಪ್ಪ ಅವರ ಭಾಷಣಕ್ಕೂ ಅಡ್ಡಿಪಡಿಸಿದರು. 
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ನಡಾವಳಿಕೆಗೆ ಕೆಂಡಾಮಂಡಲರಾದ ಸ್ಪೀಕರ್ ರಮೇಶ್ ಕುಮಾರ್  ಕರ್ನಾಟಕದ ಜನತೆ ನಿಮ್ಮನ್ನು ಗಮನಿಸುತ್ತಿದ್ದಾರೆ. ಬಂದು ಕುಳಿತುಕೊಳ್ಳಿ ಎಂದು ಹೇಳಿದರೂ ಸ್ಪೀಕರ್ ಮಾತಿಗೆ ಯಾರೂ ಜಗ್ಗಲಿಲ್ಲ. ಕೊನೆಗೆ ಸಿದ್ದರಾಮಯ್ಯ ಸೂಚಿಸುತ್ತಿದ್ದಂತೆಯೇ ಕುಳಿತ ಶಾಸಕರು ಕೆಲ ಕಾಲ ಸದನ ನಡೆಯುವುದಕ್ಕೆ ಅವಕಾಶ ನೀಡಿದರು. ಬಿಜೆಪಿಯ ಮಾಧುಸ್ವಾಮಿ, ಯಡಿಯೂರಪ್ಪ ಮಾತನಾಡುತ್ತಿದ್ದಂತೆಯೇ ಮತ್ತೆ ಗದ್ದಲ ಎಬ್ಬಿಸಿದರು. 
ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ ತಾವು ವಿಶ್ವಾಸಮತಯಾಚನೆಗೆ ಸಿದ್ಧವಿರುವುದಾಗಿಯೂ ಅದಕ್ಕೆ ಮತ್ತಷ್ಟು ಸಮಯ ನೀಡಬೇಕೆಂದು ಸ್ಪೀಕರ್ ನ್ನು ಕೋರಿದರು. ಆದರೆ ವಿಪಕ್ಷ ನಾಯಕ ಯಡಿಯೂರಪ್ಪ ಮಾತನಾಡಿ ರಾತ್ರಿ 1 ಗಂಟೆಯಾದರೂ ಪರವಾಗಿಲ್ಲ ಇಂದೇ ವಿಶ್ವಾಸಮತಯಾಚನೆ ಪ್ರಕ್ರಿಯೆ ಪೂರ್ಣಾಗೊಳ್ಳಲಿ ಎಂದು ಆಗ್ರಹಿಸಿದರು.
SCROLL FOR NEXT