ಎ.ಮಂಜು 
ರಾಜಕೀಯ

ದೇವೇಗೌಡರ ಕುಟುಂಬಕ್ಕೆ 9 ಸಂಖ್ಯೆ ಕಂಟಕ, ರೇವಣ್ಣನ ನಿಂಬೆ ಹಣ್ಣಿಗೆ ಬೆಲೆ ಇಲ್ಲ: ಎ.ಮಂಜು

: ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ರೇವಣ್ಣ ಅವರು ಮಡಿಯಿಂದ ಬರಿಗಾಲದಲ್ಲಿ ಸಲ್ಲಿಸಿದ ಪೂಜೆ, ನಿಂಬೆಹಣ್ಣನ ಮಂತ್ರಕ್ಕೆ ಯಾವುದೇ ಫಲ ಸಿಕ್ಕಿಲ್ಲ. ರೇವಣ್ಣನ ..

ಮೈಸೂರು: ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ರೇವಣ್ಣ ಅವರು ಮಡಿಯಿಂದ ಬರಿಗಾಲದಲ್ಲಿ ಸಲ್ಲಿಸಿದ ಪೂಜೆ, ನಿಂಬೆಹಣ್ಣನ ಮಂತ್ರಕ್ಕೆ ಯಾವುದೇ ಫಲ ಸಿಕ್ಕಿಲ್ಲ. ರೇವಣ್ಣನ ನಿಂಬೆ ಹಣ್ಣಿಗೆ ಬೆಲೆ ಸಿಗಲಿಲ್ಲ ಎಂದು ಮಾಜಿ ಸಚಿವ ಎ.ಮಂಜು ವ್ಯಂಗ್ಯವಾಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರ ಪ್ರಯತ್ನಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಅವರ ಪೂಜಾ ಫಲ ಫಲಿಸಿಲ್ಲ. ಪೂಜೆ ಮಾಡಿದ ಮಾತ್ರಕ್ಕೆ ರಾಜಕಾರಣದಲ್ಲಿ ಬದಲಾವಣೆಯಾಗುತ್ತದೆ ಎಂಬುದು ಅವರ ಭ್ರಮೆ ಎಂದು ಟೀಕಿಸಿದ್ದಾರೆ.
ಮಂಗಳವಾರವು ವಿಧಾನಸಭೆ ಕಲಾಪ ಮುಂದೂಡಿಕೆ ಆದರೆ ಒಳ್ಳೆಯದಾಗುತ್ತದೆ ಅಂದುಕೊಂಡಿದ್ದರು. ಇದಕ್ಕಾಗಿ ರೇವಣ್ಣ ಮಂಗಳವಾರದವರೆಗೂ ವಿಶ್ವಾಸ ನಿರ್ಣಯ ಮುಂದೂಡಿದ್ದರು. ಅವರ ನಿಂಬೆ ಹಣ್ಣಿಗೆ, ಪೂಜೆಗೆ ಇದೀಗ ತಕ್ಕ ಉತ್ತರ ಸಿಕ್ಕಿದೆ ಎಂದು ಅವರು ಕುಟುಕಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ 9ರ ಸಂಖ್ಯೆ ಅದೃಷ್ಟವಿಲ್ಲ. 1999, 2009 ಹಾಗೂ 2019ರಲ್ಲಿ ಅವರು ಕಂಡ ಸೋಲೆ ಇದಕ್ಕೆ ಪ್ರಮುಖ ಸಾಕ್ಷಿ. ಈ ಹಿಂದೆಯೇ ಹೇಳಿದ್ದೆ 9 ಸಂಖ್ಯೆ ದೇವೇಗೌಡರಿಗೆ ಕೈಗೆಟಕುವುದಿಲ್ಲ ಎಂದು, ಈಗ ಮತ್ತೊಮ್ಮೆ ದೇವೇಗೌಡರ ವಿಷಯದಲ್ಲಿ ಇದು ನಿಜವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT