ಬೆಂಗಳೂರು: ಅತೃಪ್ತ ಶಾಸಕರು ಬಂದಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ. ಬಿ.ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದೇ ಸಂವಿಧಾನ ಬಾಹಿರವಾಗಿದೆ. ಬಿಜೆಪಿಯವರು ಹಣದ ಆಮಿಷ ಒಡ್ಡಿ ಕುದುರೆ ವ್ಯಾಪಾರ ನಡೆಸಿದ್ದು, ಇದು ಬಿಜೆಪಿ ಗೆಲವು ಅಲ್ಲ. ಕುದುರೆ ವ್ಯಾಪಾರಕ್ಕೆ ಸಿಕ್ಕ ಜಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇಂದು ನಗರದ ಗಾಂಧೀ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ರಾಜ್ಯದಲ್ಲಿ ಬಿಜೆಪಿ ಸಂವಿಧಾನಾತ್ಮಕವಾಗಿ ಸರ್ಕಾರ ರಚಿಸಿಲ್ಲ. ಬಿಜೆಪಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸ್ಪೀಕರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ ನಂತರ ವಿಧಾಸಭೆಯ ಬಲ 221ಕ್ಕೆ ಇಳಿದಿದೆ. ಬಹುಮತ ಸಾಬೀತಾಗೆ 111 ಸದಸ್ಯರ ಅಗತ್ಯ ಇದೆ. ಆದರೆ ಬಿಜೆಪಿ ಕೇವಲ 105 ಶಾಸಕರನ್ನು ಹೊಂದಿದ್ದು, ಸೋಮವಾರ ಹೇಗೆ ಬಹುಮತ ಪಡೆಯಲಿದೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ 111 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಬೇಕಿತ್ತು. ಆದರೆ ಸಂಖ್ಯಾಬಲ ಇಲ್ಲದ ಕಾರಣ ಅವರು ಪಟ್ಟಿ ನೀಡಿಲ್ಲ. ಹೀಗಾಗಿ ಬಿಎಸ್ ವೈ ಸರ್ಕಾರ ಸಂವಿಧಾನಾತ್ಮಕವಾಗಿ ರಚನೆಯಾದ ಸರ್ಕಾರ ಅಲ್ಲ ಎಂದರು.
ಬಹುಮತ ಇಲ್ಲದೆಯೇ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಕುದುರೆ ವ್ಯಾಪಾರ ಮಾಡಿ ಜನರಿಂದ ಸಿಕ್ಕ ಜಯ ಎನ್ನುತ್ತಿದ್ದಾರೆ. ಇದು ಜನರ ವಿಜಯ ಅಲ್ಲ, ಕುದುರೆ ವ್ಯಾಪಾರದ ವಿಜಯ' ಎಂದು ಟೀಕಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos