ರಾಜಕೀಯ

ಹಣಕಾಸು ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

Srinivas Rao BV
ಬೆಂಗಳೂರು: ವಿಧಾನಸಭೆಯಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬಹುಮತ ಸಾಬೀತಾದ ಕೂಡಲೇ  ಧನವಿನಿಯೋಗ ವಿಧೇಯಕವೂ ಧ್ವನಿಮತದಿಂದ ಅಂಗೀಕಾರಗೊಂಡಿತು. 
ಹಿಂದಿನ ಮುಖ್ಯ ಮಂತ್ರಿ  ಎಚ್.ಡಿ. ಕುಮಾರಸ್ವಾಮಿ  ಅವರು ಮಂಡಿಸಿದ್ದ ಬಜೆಟ್ ಪ್ರಸ್ತಾವನೆಗೆ ಸದನ ಒಪ್ಪಿಗೆ ಕೊಡಬೇಕು ಎಂದು ಸಭಾ ನಾಯಕ  ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ ಮನವಿ ನಂತರ ಹಣಕಾಸು ವಿಧೇಯಕಕ್ಕೆ ಸದನ ಧ್ವನಿಮತದ ಅಂಗೀಕಾರ ನೀಡಿತು.
ಮೂರು ತಿಂಗಳ ಲೇಖಾನುದಾನಕ್ಕೆ ಸದನ ಒಪ್ಪಿಗೆ ನೀಡಿದೆ. 3,327 ಕೋಟಿ ರೂಪಾಯಿ ಪೂರಕ ಬಜೆಟ್‌ ಗೂ ಸದನ ಇಂದು ಧ್ವನಿಮತದ ಮೂಲಕ ಅಂಗೀಕಾರ ನೀಡಿತು. 
ಬಜೆಟ್ ಮೇಲೆ ಸಮಗ್ರ ಚರ್ಚೆಯಾಗಬೇಕು, ಹೀಗಾಗಿ ಮೂರು ತಿಂಗಳ ಲೇಖಾನುದಾನಕ್ಕೆ ಸರ್ಕಾರ ಒಪ್ಪಿಗೆ ಪಡೆಯಲು ತಕರಾರು ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು.  ನಂತರ ಮೂರು ತಿಂಗಳ ಲೇಖಾನುದಾನಕ್ಕೆ ಸದನ ಒಪ್ಪಿಗೆ ನೀಡಿತು. ಬಳಿಕ ಕಲಾಪವನ್ನು ಸಂಜೆ 5 ಗಂಟೆಗೆ ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಮುಂದೂಡಿದರು.
SCROLL FOR NEXT