ರಾಜಕೀಯ

ಬೆಳಗಾವಿಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಸರ್ವಪ್ರಯತ್ನ: ಸತೀಶ್ ಜಾರಕಿಹೋಳಿ

Raghavendra Adiga
ಬೆಳಗಾವಿ: ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ ಐತಿಹಾಸಿಕವಾದುದು, ಮತ್ತು ಹಣಕ್ಕಾಗಿ ಪಕ್ಷಗಳನ್ನು ಬದಲಾಯಿಸುವ ಶಾಸಕರಿಗೆ ಇದೊಂದು ಎಚ್ಚರಿಕೆಯ ಪಾಠವಾಗಿದೆ ಎಂದು ಮಾಜಿ ಸಚಿವ ಮತ್ತು ಯಮಕನಮರಡಿ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.
ಸ್ಪೀಕರ್ ನಿರ್ಧಾರವನ್ನು ಸ್ವಾಗತಿಸಿದ ಅವರು ಅಥಣಿಯಲ್ಲಿ ಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. "ಬೆಳಗಾವಿ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಆ ಮೂರು ಕ್ಷೇತ್ರಗಳಲ್ಲಿ ಪಕ್ಷವನ್ನು ಸಂಘಟಿಸುವ ಮತ್ತು ಬಲಪಡಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಇದೀಗ ಕಾರ್ಯಕರ್ತರೊಡನೆ ಸಭೆ ನಡೆಯಲಿದ್ದು ಸೂಕ್ತ ಅಭ್ಯರ್ಥಿಗಳನ್ನು ಚುನಾವಣೆಗೆ ಆಯ್ಕೆ ಮಾಡಲಾಗುತ್ತದೆ. ಅಥಣಿ  ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರಿ ಲಾಬಿ ಇದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕಾಗಿ ನಾವು ಕಾಯಬೇಕಾಗಿದೆ ಎಂದು ಅವರು ಹೇಳಿದರು.
ಬಂಡಾಯ ಶಾಸಕರಲ್ಲಿ ನಾಲ್ಲ್ಕು ಗುಂಪುಗಳಿದೆ. ರಮೇಶ್ ಜಾರಕಿಹೋಳಿ ಗುಂಪು, ಬೆಂಗಳೂರು ಶಾಸಕರ ಬಣ, ಜೆಡಿಎಸ್ ಶಾಸಕರ ಗುಂಪು ಮತ್ತು ಶಾಸಕ ನಾಗೇಂದ್ರ ಬಣ ಇದರಲ್ಲಿ ರಮೇಶ್ ಜಾರಕಿಹೋಳಿ ನೇತೃತ್ವದ ಬಣ ಸರ್ಕಾರದ ವಿರುದ್ಧ ಮೊದಲು ಭಿನ್ನಮತ ಬಹಿರಂಗಪಡಿಸಿದೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಇದು ಒಂದು ದೊಡ್ಡ ಅಂಶವಾಗಿದೆ ಎಂದು ಸತೀಶ್ ಜಾರಕಿಹೋಳಿ ಅಭಿಪ್ರಾಯಪಟ್ಟಿದ್ದಾರೆ.
ಉಪಚುನಾವಣೆಗಳನ್ನು ಯಾವುದೇ ಸಮಯದಲ್ಲಿ ಘೋಷಿಸಬಹುದು, ಮತ್ತು ಮುಂದಿನ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ನಡೆಸಬಹುದು, ಮತ್ತು ನಾವು ದಕ್ಕಾಗಿ ಸಿದ್ದವಾಗಬೇಕಿದೆ.- ಅವರು ಹೇಳಿದ್ದಾರೆ.
SCROLL FOR NEXT