ರಾಜಕೀಯ

ಮೈತ್ರಿ ಸರ್ಕಾರ ಅಲುಗಾಡಿಸಲು ಬಿಜೆಪಿ ಪ್ರಯತ್ನಿಸಿದರೇ ನಾವು ಸುಮ್ಮನೇ ಕೂತಿರ್ತಿವಾ?: ಪರಮೇಶ್ವರ್

Shilpa D
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸುಭಧ್ರವಾಗಿದೆ ಎಂದು ಉಪಮುಖ್ಯಮಂತ್ರಿ ಜಿ,ಪರಮೇಶ್ವರ್ ಹೇಳಿದ್ದಾರೆ. ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಸುಮಾರು 1 ಗಂಟೆ ಕಾಲ ಚರ್ಚೆ ನಡೆಸಿ ಹೊರ ಬಂದ ಪರಮೇಶ್ವರ್ ಮುಖದಲ್ಲಿ ಆತ್ನಮ ವಿಶ್ವಾಸ ಎದ್ದು ಕಾಣುತ್ತಿತ್ತು.
ಒಂದು ವೇಳೆ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸಲು ಪ್ರಯತ್ನಿಸಿದರೇ ನಾವು ಸುಮ್ಮನೇ ಕುಳಿತಿರುತ್ತೇವಾ, ಅದಕ್ಕೆ ಪ್ರತ್ಯುತ್ತರ ಕೊಡಲು ನಾವು ತಂತ್ರ ರೂಪಿಸುತ್ತೇವೆ ಎಂದು  ಪರಮೇಶ್ವರ್ ಹೇಳಿದ್ದಾರೆ. ಇಬ್ಬರು ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಅವರಿಗೆ ಸೂಕ್ತ ಸ್ಥಾನಮಾನ  ನೀಡಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಗ್ರಾಮವಾಸ್ತವ್ಯದ ಬಗ್ಗೆ ಮಾತನಾಡಿದ ಪರಮೇಶ್ವರ್, ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ತಾವು ಕೂಡ ಇದೇ ರೀತಿ ಜನರನ್ನು  ಭೇಟಿ ಮಾಡುವುದಾಗಿ ತಿಳಿಸಿದ್ದಾರೆ,  ಇನ್ನೂ ಸರ್ಕಾರ ಐದು ವರ್ಷ ಪೂರೈಸುತ್ತೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ, 
ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ ಪರಮೇಶ್ವರ್ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಾವು ಹೊಸ ಯೋಜನೆ ಸಿದ್ಧಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಘನ ತ್ಯಾಜ್ಯ ಸಮಸ್ಯಯನ್ನು ಶೀಘ್ರವೇ ಬಗೆಹರಿಸುವುದಾಗಿ ತಿಳಿಸಿದ್ದಾರೆ,  40 ಸಾವಿರ ಪೌರ ಕಾರ್ಮಿಕರು  ನೋಂದಾಯಿಸಿಕೊಂಡಿದ್ದಾರೆ, ಆದರೆ ಅದರಲ್ಲಿ, ಕೇವಲ 16 ಸಾವಿರ ಪೌರಕಾರ್ಮಿಕರು ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ದಾಖಲೆ ಪ್ರಕಾರ 5ಸಾವಿರ ಕಸದ ಲಾರಿಗಳಿವೆ, ಆಧರೆ 2,640 ಲಾರಿಗಳು ಮಾತ್ರ ಕಸ ಸಂಗ್ರಹಿಸಲು ಬರುತ್ತಿವೆ ಎಂದು ಹೇಳಿದ್ದಾರೆ.
SCROLL FOR NEXT